ಗೋಣಿಕೊಪ್ಪಲು, ಏ. ೧೮: ಕೊಡಗು ಕೊಡವ ಸವಿತಾ ಸಮಾಜ ಪೊನ್ನಂಪೇಟೆ ತಾಲೂಕು-ಗೋಣಿಕೊಪ್ಪ, ಇವರ ವತಿಯಿಂದ ತಾ.೨೬ರಂದು ಹಾತೂರು ಶಾಲಾ ಮೈದಾನದಲ್ಲಿ ೩ನೇ ವರ್ಷದ ಲೀಗ್ ಮಾದರಿಯ ಜಿಲ್ಲಾಮಟ್ಟದ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯು ನಡೆಯಲಿದೆ. ಸವಿತಾ ಸಮಾಜದ ಒಗ್ಗೂಡುವಿಕೆಗಾಗಿ ಕಳೆದ ೨ ವರ್ಷಗಳಿಂದ ಕ್ರೀಡೆಯನ್ನು ಆಯೋಜಿಸುತ್ತಾ ಬರಲಾಗಿದೆ. ಈ ಬಾರಿಯೂ ಪಂದ್ಯಾವಳಿಗೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕೊಡಗು ಕೊಡವ ಸವಿತಾ ಸಮಾಜದ ೯ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಮಕ್ಕಳಿಗಾಗಿ ವಿವಿಧ ಕ್ರೀಡಾ ಪೈಪೋಟಿಗಳನ್ನು ಏರ್ಪಡಿಸಲಾಗಿದೆ.
ಸಮಾಜ ಬಾಂಧವರ ಒಗ್ಗೂಡುವಿಕೆಗೆ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಕಳೆದ ೨ ವರ್ಷಗಳು ಅತ್ಯುತ್ತಮ ರೀತಿಯಲ್ಲಿ ಪಂದ್ಯಾವಳಿಗಳು ನಡೆದಿವೆ. ಈ ಬಾರಿಯೂ ಹೆಚ್ಚಿನ ಮುತುವರ್ಜಿಯಿಂದ ಪಂದ್ಯಾವಳಿಯ ಯಶಸ್ಸಿಗಾಗಿ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಪಂದ್ಯಾವಳಿ ಮೂಲಕ ಸಮಾಜ ಬಾಂಧವರನ್ನು ಒಗ್ಗೂಡಿಸುವ ಪ್ರಯತ್ನಗಳು ಮುಂದುವರೆಯುತ್ತಿವೆ. ಲೀಗ್ ಮಾದರಿಯಲ್ಲಿ ೯ ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ.
ಬೆಳಿಗ್ಗೆ ೮ ಗಂಟೆಗೆ ಪಂದ್ಯಾವಳಿಯು ಆರಂಭಗೊಳ್ಳಲಿದ್ದು ವಿಜೇತ ತಂಡಕ್ಕೆ ನಗದು ಬಹುಮಾನ ಸೇರಿದಂತೆ ಪಾರಿತೋಷಕಗಳನ್ನು ನೀಡಲಾಗುತ್ತಿದೆ. ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಕೊಡಗು ಕೊಡವ ಸವಿತಾ ಸಮಾಜದ ಅಧ್ಯಕ್ಷರಾದ ಸಾಬು ಅವರು ಮಾಹಿತಿ ನೀಡಿದ್ದಾರೆ.