*ಗೋಣಿಕೊಪ್ಪ, ಏ. ೧೮: ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಪಾಲಿಬೆಟ್ಟ ಲೂರ್ದು ಮಾತೆ ದೇವಾಲಯ, ತಿತಿಮತಿ ಫಾತಿಮ ಮಾತೆ ದೇವಾಲಯ ವತಿಯಿಂದ ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನಗಳಲ್ಲಿ ೧೫ನೇ ವರ್ಷದ ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ ಹಾಗೂ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ಹಿರಿಯ ಕ್ರೀಡಾಪಟು ಚೆಪ್ಪುಡೀರ ಎ. ಕಾರ್ಯಪ್ಪ ಕ್ರಿಕೆಟ್ ಪಂದ್ಯ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟ ಹೆಚ್ಚಾಗಬೇಕಿದೆ. ಫುಟ್ಬಾಲ್ ವಿಶ್ವದಲ್ಲಿಯೇ ವಿಶೇಷ ಕ್ರೀಡೆ. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಸಾಕಷ್ಟು ಆಟಗಾರರು ಅಂತರರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ವಿಶೇಷ ಎಂದರು.

ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕಾರ್ಯದರ್ಶಿ ಲಾರೆನ್ಸ್ ಮಾತನಾಡಿ, ಪ್ರತಿಯೊಬ್ಬ ಕ್ರಿಶ್ಚಿಯನ್ನರು ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವದ ಮೂಲಕ ಒಂದಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ಸಮಾಜಮುಖಿ ಕಾರ್ಯದ ಮೂಲಕ ಗಮನ ಸೆಳೆಯಲಾಗುತ್ತಿದೆ. ಧರ್ಮದ ಕೇಂದ್ರದ ಕಾರ್ಯಕ್ರಮದಲ್ಲಿ ಯುವ ಸಮೂಹ ಗೌರವ ನೀಡಿ ಆಗಮಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಸಂತ ಅನ್ನಮ್ಮ ದೇವಾಲಯ ಗುರು ಜೇಮ್ಸ್ ಡೊಮೆನಿಕ್, ಹಟ್ಟಿಹೊಳೆ ನಿರ್ಮಲ ಮಾತೆ ದೇವಾಲಯ ಗುರು ಗಿಲ್ಬರ್ಟ್ ಡಿಸಿಲ್ವಾ, ಅಮ್ಮತ್ತಿ ಸಂತ ಅಂಥೋಣಿ ಧರ್ಮಗುರು ಮದಲೈ ಮುತ್ತು, ಕಾಂಗ್ರೆಸ್ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಇದ್ದರು. ಜಿಲ್ಲಾ ವ್ಯಾಪ್ತಿಯ ೨೩ ತಂಡಗಳು ಕ್ರಿಕೆಟ್‌ನಲ್ಲಿ ಭಾಗವಹಿಸಿದ್ದವು. ಸಾಧಕರುಗಳಾದ ಡಿವೀನ ಸಲ್ಡಾನ, ಜಿಮಿ ಸಿಕ್ವೆರಾ, ಝಾನ್ಸಿ ಪೀಟರ್, ವಿ.ಎ. ಲಾರೆನ್ಸ್, ಡೇವಿಡ್ ಡಿಸೋಜ, ರಾಬರ್ಟ್ ರೋಡ್ರಿಗಸ್, ಕೆ.ಜೆ. ರಾಬಿನ್ ಅವರುಗಳನ್ನು ಸನ್ಮಾನಿಸಲಾಯಿತು.

ಪೊನ್ನಂಪೇಟೆ ತಾಲೂಕು ಘಟಕ ಅಧ್ಯಕ್ಷ ಸುಭಾಶ್ ಮ್ಯಾಥ್ಯು, ಜಿಲ್ಲಾ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್ ಗೌರವ ಅಧ್ಯಕ್ಷ ಜೋಕಿಂ ವಾಸ್, ಉಪಾಧ್ಯಕ್ಷ ಜೋಕಿಂ ರೊಡ್ರಿಗಸ್, ಕಾರ್ಯದರ್ಶಿ ಮರ್ವಿನ್ ಲೋಬೋ, ವಿಕ್ಟೋರಿಯ ತೆರೆಸಾ ಉಪಸ್ಥಿತರಿದ್ದರು.

- ಎನ್.ಎನ್. ದಿನೇಶ್