ಚೆಯ್ಯಂಡಾಣೆ, ಏ. ೧೮: ಉಡುಪಿ ಜಿಲ್ಲೆಯ ಕುಂದಾಪುರ ದಿಂದ ಸಂಬAಧಿಕ ರೊಂದಿಗೆ ದರ್ಗಾ ಪ್ರವಾಸಕ್ಕೆಂದು ಬಂದ ವ್ಯಕ್ತಿಯೊಬ್ಬರು ನಾಪೋಕ್ಲು ಬಳಿಯ ಎಮ್ಮೆಮಾಡು ದರ್ಗಾದಲ್ಲಿ ಕಾಣೆಯಾಗಿರುವ ಬಗ್ಗೆ ವರದಿಯಾಗಿದ್ದು ನಾಪೋಕ್ಲು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಕುರ್ಕಂಜೆ ಗ್ರಾಮದ ನಿವಾಸಿ ಹಸೈನಾರ್ ಸಾಹೇಬ್ (೬೫) ಎಂಬವರು ತಾ. ೧೩ ರಂದು ಕುಂದಾಪುರದಿAದ ಸಂಬAಧಿಕರೊAದಿಗೆ ದರ್ಗಾ ಪ್ರವಾಸಕ್ಕೆ ತೆರಳಿದ್ದರು. ತಾ. ೧೫ ರಂದು ರಾತ್ರಿ ೧೧.೩೦ ಗಂಟೆಗೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮಕ್ಕೆ ತಲುಪಿದ್ದಾರೆ. ಎಮ್ಮೆಮಾಡಿನಲ್ಲಿ ರೂಂ ಸಿಗದ ಕಾರಣ ಮಸೀದಿಯ ಆವರಣದಲ್ಲಿ ಹಸೈನಾರ್ ಮಲಗಿದ್ದರು ಎನ್ನಲಾಗಿದೆ.

ನಂತರ ಮಲಗಿದ್ದ ಜಾಗದಲ್ಲಿ ಹಸೈನಾರ್ ಅವರು ಕಾಣದಾಗಿದ್ದು, ಸಂಬAಧಿಕರು ಇವರನ್ನು ಹುಡುಕಾಡಿದ್ದಾರೆ. ಬಳಿಕ ಮಸೀದಿಯ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಮಸೀದಿಯ ಮುಖ್ಯ ದ್ವಾರದ ಗೇಟಿನ ಮುಖಾಂತರ ಹಸೈನಾರ್ ಹೊರಗಡೆ ತೆರಳುವ ದೃಶ್ಯ ಸೆರೆಯಾಗಿದೆ.

ಎಮ್ಮೆಮಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ತಾ. ೧೬ ರಂದು ಸಂಬAಧಿಕರು ನಾಪೋಕ್ಲು ಠಾಣೆಗೆ ಹಸೈನಾರ್ ಅವರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದು ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಹೈಸೈನಾರ್ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ನಾಪತ್ತೆಯಾಗಿರುವ ಹಸೈನಾರ್ ಕನ್ನಡ, ಬ್ಯಾರಿ ಭಾಷೆ ಮಾತನಾಡುವವರಾಗಿದ್ದಾರೆ.

ಇವರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಸಾರ್ವಜನಿಕರು ತಕ್ಷಣ ನಾಪೋಕ್ಲು ಪೊಲೀಸ್ ಠಾಣೆ ಅಥವಾ ಕೊಡಗು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮಿಗೆ ೯೪೮೦೮೦೪೯೪೮, ೦೮೨೭೨೨೨೮೩೩೦ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಕೋರಿದೆ.

- ಅಶ್ರಫ್