ಮಡಿಕೇರಿ ಏ. ೧೫: ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ತಾ. ೧೯ ರಿಂದ ೨೧ರ ವರೆಗೆ ಶ್ರೀ ಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ಕೋಲ ಹಾಗೂ ಅಗೆಲು ಸೇವೆ ನಡೆಯಲಿದೆ.

ತಾ. ೧೯ ರಂದು ಸಂಜೆ ೬ ಗಂಟೆಗೆ ಪಯ್ಯನೂರಿನ ತಂತ್ರಿಗಳಾದ ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ದೇವಿಯ ಸನ್ನಿಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳಾದ ಆಚಾರ್ಯ ವರಣಂ, ಪುಣ್ಯಾಹ ಶುದ್ದಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಪ್ರಸಾದ ವಿತರಣೆ ನೆರವೇರಲಿದೆ.

ತಾ. ೨೦ ರಂದು ಬೆಳಿಗ್ಗೆ ೬ ಗಂಟೆಗೆ ಮಹಾಗಣಪತಿ ಹೋಮ, ನವಕ ಪಂಚಗವ್ಯ ಕಳಶ ಪೂಜೆ, ನವಕ ಪಂಚಗವ್ಯ ಕಳಶಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಪಾಷಾಣಮೂರ್ತಿ ದೈವದ ಕಳಶ ಪೂಜೆ, ಅಲಂಕಾರ ಪೂಜೆ ಹಾಗೂ ಮಂಗಳಾರತಿ ನಡೆಯಲಿದೆ.

ನಾಗ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಪ್ರಯುಕ್ತ ಬೆಳಿಗ್ಗೆ ೮ ಗಂಟೆಗೆ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭಿಷೇಕ, ೧೦ ಗಂಟೆಯಿAದ ದೇವಿಯ ಸನ್ನಧಿಯಲ್ಲಿ ತುಲಾಭಾರ ಸೇವೆ, ೧೧.೩೦ ಗಂಟೆಗೆ ಉಡುಪಿಯ ಪೆರ್ಲಂಬಾಡಿಯ ಖ್ಯಾತ ನಾಗಪಾತ್ರಿಗಳಾದ ಶ್ರೀ ರಮಾನಂದ ಭಟ್ ಅವರಿಂದ ನಾಗದರ್ಶನ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ೭.೩೦ರಿಂದ ಪಾಷಾಣಮೂರ್ತಿ ದೈವ ಕೋಲ ಜರುಗಲಿದೆ.

ತಾ. ೨೧ ರಂದು ಸಂಜೆ ೫ ಗಂಟೆಗೆ ಪಾಷಾಣಮೂರ್ತಿಯ ಅಗೆಲು ಸೇವೆ ನಡೆಯಲಿದೆ. ವರ್ಷಕ್ಕೊಮ್ಮೆ ನಡೆಯುವ ಅಗೆಲು ಸೇವೆಗೆ ಸೇವಾರ್ಥಿಗಳು ಮುಂಚಿತವಾಗಿ ದೇವಾಲಯದಲ್ಲಿ ರಶೀದಿಯನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ೯೮೪೫೮೩೬೨೦೪, ೯೯೦೨೬೧೨೮೨೯, ನ್ನು ಸಂಪರ್ಕಿಸಬಹುದಾಗಿದೆ.