ಮಡಿಕೇರಿ, ಏ.೧೫: ಬಿಟ್ಟಂಗಾಲದಲ್ಲಿ ನೂತನವಾಗಿ ಆರಂಭಗೊAಡಿರುವ ಇಂಡಿಯನ್ ಆಯಿಲ್ ಕಂಪನಿಯ ಅಯ್ಯಪ್ಪ ಫಿಲ್ಲಿಂಗ್ ಸ್ಟೇಷನ್ ಅನ್ನು ಕೊಡಗು ಜೇನು ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ಕಂಜಿತAಡ ಮಂದಣ್ಣ ದಂಪತಿ ಉದ್ಘಾಟಿಸಿದರು.

ಇಂಧನ ಪಂಪುಗಳ ಚಾಲನೆಯನ್ನು ಮಾಜಿ ಸೈನಿಕ ಚಿದಾನಂದ ಬಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶಕ್ತಿ ದಿನ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮದ್ ರಾಫಿ, ಉದ್ಯಮಿ ಕಬೀರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುರೇಶ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಯ್ಯಪ್ಪ ಫಿಲ್ಲಿಂಗ್ ಸ್ಟೇಷನ್ ಪಾಲುದಾರರಾದ ಬಲ್ಲಣಮಡ ಸಂಪನ್, ದೇಯಂಡ ಅಯ್ಯಪ್ಪ, ಶ್ರೀಧರ್ ನೆಲ್ಲಿತ್ತಾಯ ದಂಪತಿ ಇದ್ದರು.