ಮಡಿಕೇರಿ, ಏ. ೧೫: ಹಿಂದೂ ಮಲಯಾಳಿ ಸಮುದಾಯ ಹಾಗೂ ತುಳುನಾಡಿನ ಜನರ ಹೊಸ ವರ್ಷವಾದ ವಿಷು ಹಬ್ಬವನ್ನು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಮನೆಗಳಲ್ಲಿ, ದೇವಾಲಯಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಸವಿಯುವ ಮೂಲಕ ಹಬ್ಬಾಚರಣೆ ನಡೆಯಿತು.
ಕರಿಕೆ
ಕರಿಕೆ: ಇಲ್ಲಿಗೆ ಸಮೀಪದ ಚೆತ್ತುಕಾಯ ಶ್ರೀ ವನ ಶಾಸ್ತವು ದೇವಾಲಯದಲ್ಲಿ ವಿಷು ಹಬ್ಬದ ಪ್ರಯುಕ್ತ ಮುಂಜಾನೆ ವಿಷುಕಣಿ ಇಡಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ನಾಪೋಕ್ಲು
ನಾಪೋಕ್ಲು: ಸ್ಥಳೀಯ ಹಿಂದೂ ಮಲಯಾಳಿ ಸಂಘದ ವತಿಯಿಂದ ವಿಷು ಹಬ್ಬವನ್ನು ಸಡಗರ, ಸಂಭ್ರಮದಿAದ ಆಚರಿಸಲಾಯಿತು. ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವರ ಮೂರ್ತಿಯನ್ನು ಶೃಂಗರಿಸಿ ದೀಪ ಬೆಳಗಿ ಫಲ ಪುಷ್ಪಗಳನ್ನು ಅರ್ಪಿಸಲಾಯಿತು. ನಂತರ ಜನಾಂಗ ಬಾಂಧವರಿಗೆ ವಿಷು ಕಣಿ ಕೊನ್ನಪೂ ವಿತರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಕೆ.ಕೆ.ಅನಿಲ್, ಪೊನ್ನು ಮುತ್ತಪ್ಪ ದೇವಾಲಯ ಅಧ್ಯಕ್ಷ ಚಂದ್ರ ದಿನದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು,
ಈ ಸಂದರ್ಭ ಸಂಘದ ಉಪಾಧ್ಯಕ್ಷ ಅಭಿಲಾಷ್, ಮಹಿಳಾ ಘಟಕ ಅಧ್ಯಕ್ಷೆ ಸುಮಿತ್ರಾ ವಿನೋದ್, ಪೊನ್ನು ಮುತ್ತಪ್ಪ ದೇವಾಲಯ ಕಾರ್ಯದರ್ಶಿ ರಮೇಂದ್ರ, ಸಹಕಾರ್ಯದರ್ಶಿ ಮಹೇಶ್ ಮೆನನ್, ಖಜಾಂಚಿ ವಿಶ್ವನಾಥ್, ಆಡಳಿತ ಮಂಡಳಿಯ ಸದಸ್ಯರು ಮೋಹನ್, ಉತ್ತಮ, ಶಿವ ಕೆ.ಡಿ, ಮಹೇಶ್ ಕೆ, ಸತೀಶ್, ವಿನಿಲ್, ರಘು ಟಿ.ಕೆ., ಪ್ರಸಾದ್, ಸುಧಾಬಾಲಕೃಷ್ಣ, ವಿಮಲ, ಶೀಲಾ, ಪ್ರಮೀಳಾ, ಸುನೀತಾ, ಅಂಬಿಕಾ, ಪ್ರಿಯಾ, ಓಮನ ಹಾಗೂ ಹಿರಿಯರು ಮತ್ತು ಸಂಘದ ಸರ್ವ ಸದಸ್ಯರು ಭಾಗವಹಿಸಿದ್ದರು.