ಮಡಿಕೇರಿ, ಏ. ೧೫: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ತಾ. ೧೭ ರಿಂದ ೨೪ರವರಗೆ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸಮಿತಿ ಅಧ್ಯಕ್ಷ ಕೆ.ಎಂ. ಹುಸೈನ್ ಸಖಾಫಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಹಝ್ರತ್ ಸೂಫಿ ಶಹೀದ್ ಮತ್ತು ಸಯ್ಯಿದ್ ಹಸನ್ ಸಖಾಫ್ ಅಲ್ ಹಳ್ರಮಿ ಹೆಸರಿನಲ್ಲಿ ಆಚರಿಸುವ ೪೦೦ ವರ್ಷಗಳ ಇತಿಹಾಸ ಹೊಂದಿರುವ ಎಮ್ಮೆಮಾಡು ಉರೂಸ್‌ಗೆ ತಾ. ೧೭ ರಂದು ಚಾಲನೆ ದೊರೆಯಲಿದ್ದು, ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಎಂ. ಹುಸೈನ್ ಸಖಾಫಿ ಧ್ವಜಾರೋಹಣ ನೆರವೇರಿಸಲಿದ್ದು, ಸಮಸ್ತ ಕೇರಳ ಜಂಇಯ್ಯುತುಲ್ ಉಲಮಾ ಅಧ್ಯಕ್ಷ ಸಯ್ಯಿದು ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕ್ಯೋಯ ತಂಞಳ್ ಮಖಾಂ ಝಿಝಾರತ್ ಉದ್ಘಾಟಿಸಲಿದ್ದಾರೆ. ರಾತ್ರಿ ೮.೩೦ಕ್ಕೆ ಸ್ಥಳೀಯ ಖತೀಬರಾದ ಅಬ್ದುಲ್ ರಾಝಿಕ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುದರಿಸ್ ಎ.ಪಿ. ಹಂಸ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ತಾ,. ೧೮ ರಂದು ರಾತ್ರಿ ೭ ಗಂಟೆಗೆ ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ನೇತೃತ್ವದಲ್ಲಿ ದ್ಸಿಕ್ರ್ ಮಜ್ಲಿಸ್ ನಡೆಯಲಿದೆ. ತಾ. ೧೯ ರಂದು ರಾತ್ರಿ ೭ ಗಂಟೆಗೆ ಸೂಫಿ ಶಹೀದ್ ದರ್ಗಾದಲ್ಲಿ ನಡೆಯಲಿರುವ ಖತಂ ದುಆ ಮಜ್ಲಿಸ್ ಸಯ್ಯಿದ್ ಶಿಹಾಬುದ್ದೀನ್ ಮತ್ತನೂರ್ ತಂಙಳ್ ನೇತೃತ್ವದಲ್ಲಿ ನಡೆಯಲಿದೆ. ರಾತ್ರಿ ೮.೩೦ಕ್ಕೆ ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಭಾಷಣ ಮಾಡಲಿದ್ದಾರೆ ಎಂದರು.

ತಾ. ೨೦ ರಂದು ನಡೆಯುವ ಸಾರ್ವಜನಿಕ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಸಾಧ್ಯತೆ ಇದೆ ಎಂದು ಹುಸೈನ್ ತಿಳಿಸಿದರು.

ಈಗಾಗಲೇ ಮುಖ್ಯಮಂತ್ರಿಗಳನ್ನು ಸಮಿತಿಯವರು ಭೇಟಿಯಾದ ಸಂದರ್ಭ ಆಗಮಿಸುವ ಭರವಸೆಯನ್ನು ನೀಡಿದ್ದಾರೆ. ಇದರೊಂದಿಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹಮ್ಮದ್, ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಮಂತರ್ ಗೌಡ, ಬೆಂಗಳೂರು ಶಾಂತಿ ನಗರ ಶಾಸಕ ಎನ್.ಎ. ಹಾರಿಸ್, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಹಾಫಿಝ್ ಸಯ್ಯಿದ್ ಮುಹಮ್ಮದ್, ಮಾಜಿ ಶಾಸಕ ಇಬ್ರಾಯಿಂ ಮಾಸ್ಟರ್, ಪ್ರಮುಖರಾದ ಹಂಸ ಕೊಟ್ಟಮುಡಿ, ಇಸ್ಮಾಯಿಲ್, ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ನೆರವಂಡ ಉಮೇಶ್, ಮನುಮುತ್ತಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ. ಅಂದು ೪ ಗಂಟೆಯಿAದ ರಾತ್ರಿ ೮.೩೦ರ ತನಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಅನ್ವರ್ ಮುಯ್ಯಿದ್ದೀನ್ ಹುದವಿ ಆಲುವ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾ. ೨೧ ರಂದು ನವಾಸ್ ಮನ್ನಾನಿ ಪನವೂರ್ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ತಾ. ೨೨ ರಂದು ಬೆಳಿಗ್ಗೆ ಅಯ್ಯಿದ್ ಮುಹಮ್ಮದ್ ಮಶ್ಹೂದ್ ದುಅ ಮಜ್ಲಿಸ್‌ಗೆ ನೇತೃತ್ವ ನೀಡಲಿದ್ದಾರೆ. ರಾತ್ರಿ ನಡೆಯಲಿರುವ ಧಾರ್ಮಿಕ ಪ್ರವಚನದಲ್ಲಿ ಡಾ. ಮುಹಮ್ಮದ್ ಫಾರೂಕ್ ನೀಮಿ ಕೊಲ್ಲಂ ಮುಖ್ಯ ಭಾಷಣ ಮಾಡಲಿದ್ದಾರೆ. ತಾ. ೨೩ ರಂದು ನಡೆಯಲಿರುವ ಸ್ವಲಾತ್ ಮಜ್ಲಿಸ್‌ಗೆ ಹಂಝ ಸಖಾಫಿ ಮೇಲ್ಮುರಿ ನೇತೃತ್ವ ನೀಡಲಿದ್ದಾರೆ. ಸಿರಾಜುದ್ದೀನ್ ಖಾಸಿಮಿ ಧಾರ್ಮಿಕ ಪ್ರವಚನ ಮಾಡಲಿದ್ದಾರೆ. ತಾ. ೨೪ ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ವಕೀಲ ಡಾ. ಹುಸೈನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ಅಯ್ಯಿದ್ ಮುಹಮ್ಮದ್ ತುರಾಬ್ ತಂಙಳ್ ದುಆ ನೆರವೇರಿಸಲಿದ್ದಾರೆ. ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಸಿ.ಎಂ. ಮಹೀನ್, ಸದಸ್ಯ ಅಬ್ದುಲ್ ರೆಹಮಾನ್ ಹಾಜರಿದ್ದರು.