ನಾಪೋಕ್ಲು, ಏ. ೧೪: ಇಲ್ಲಿಗೆ ಸಮೀಪದ ಬೇಗೂರು ಶಾಲೆಯ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ತಂಡ ಪ್ರಥಮ ಸ್ಥಾನ ಗಳಿಸಿತು.
ಅಂತಿಮ ಪಂದ್ಯವು ಟಿ. ಶೆಟ್ಟಿಗೇರಿ ಟೀಂ ಮತ್ತು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ತಂಡಗಳ ನಡುವೆ ನಡೆಯಿತು. ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ತಂಡ ಪ್ರಥಮ ಸ್ಥಾನ ಪಡೆದು ಬಹುಮಾನವಾಗಿ ರೂ. ೩೦,೦೦೦ ನಗದು ಮತ್ತು ಟ್ರೋಫಿ ಪಡೆದುಕೊಂಡಿತು.