ಕಡAಗ, ಏ. ೧೪: ಕಡಂಗದ ಸ.ಹಿ.ಪ್ರಾ. ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ ಹೆಚ್.ಎ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಜೀವನ ವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತಿ ಅವಶ್ಯಕ. ಶಿಸ್ತಿ ನಿಂದ ಯಶಸ್ಸು ಸಾಧಿಸಬಹುದು ಎಂದು ಹಿತನುಡಿ ಗಳನ್ನಾಡಿದರು. ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಅನುಭವವನ್ನು ಹಂಚಿಕೊAಡರು. ಸೈಬನ್ನಿಸ, ವತ್ಸಲ ಎ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸ್ವಾಗತವನ್ನು ಅತಿಥಿ ಶಿಕ್ಷಕಿ ಅಶ್ವಿನಿ ನಡೆಸಿಕೊಟ್ಟರು ಕಾರ್ಯಕ್ರಮದ ನಿರೂಪಣೆಯನ್ನು ಬಬಿತ ನಿರ್ವಹಿಸಿದರು. ಶೋಭಾ ಎಂ.ಬಿ ವಂದಿಸಿದರು.