ನಾಪೋಕ್ಲು, ಏ. ೧೪: ಅಂಚೆ ಪೇದೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಿರುಂದಾಡು ಗ್ರಾಮದ ಬಿಟ್ಟಿರ ಮಾದಪ್ಪ ಅವರನ್ನು ಹಾಗೂ ಅವರ ಪತ್ನಿಯನ್ನು ಭಗವತಿ ಸ್ತಿçÃಶಕ್ತಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮದಲ್ಲಿ ೪೫ ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿಟ್ಟಿರ ಮಾದಪ್ಪ ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಶ್ಲಾಘಿಸಿ ಶುಭ ಹಾರೈಸಿದರು.

ಕಿರುದಾಡು ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಪಾಡೆಯಂಡ ಯಶೋಧ, ಭಗವತಿ ಸ್ತಿçà ಶಕ್ತಿ ಸಂಘದ ಕಾರ್ಯದರ್ಶಿ ನಾಳಿಯಂಡ ಅನಿತಾ, ಪಳಂಗAಡ ಭಾನುಮತಿ, ನಾಳಿಯಂಡ ತಾರ, ಮಚ್ಚಂಡ ಶಿಲ್ಪ, ಕುಂಬAಡ ವನಿತಾ, ಬಾದುಮಂಡ ಮಮತ, ನಾಟೋಳಂಡ ಭಾಗೀರಥಿ, ಭೋಜಮ್ಮ, ಬಿಟ್ಟಿರ ಪ್ರೇಮ, ರಾಧಾಮಣಿ, ಪಳಂಗAಡ ದಾಟಿ, ರಾಣಿ, ಎಚ್.ಎ ದೇವಮಾಜಿ ಉಪಸ್ಥಿತರಿದ್ದರು.