ಮಡಿಕೇರಿ, ಏ. ೧೪: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಎಡಮ್ಯಾರ್ - ಕೊಡವ ನೂತನ ವರ್ಷ ಆಚರಣೆ ಇಂದು ಬೆಟ್ಟತ್ತೂರಿನಲ್ಲಿ ಜರುಗಿತು. ಹಬ್ಬದ ಅಂಗವಾಗಿ ಅಲ್ಲಿನ ಕೂಪದಿರ ಮೋಹನ್ ಅವರ ಭತ್ತದ ಗದ್ದೆಯನ್ನು ಎತ್ತುಗಳಿಂದ ಉಳುಮೆ ಮಾಡಲಾಯಿತು.

ಕೊಡವರಿಗೆ ಭೂತಾಯಿಯೊಂದಿಗಿರುವ ಸಂಬAಧವನ್ನು ಎತ್ತುಗಳಿಂದ ನಡೆಯುವ ಉಳುಮೆ ಕಾರ್ಯ ಪ್ರತಿಬಿಂಬಿಸುತ್ತದೆ ಎಂದು ಈ ಸಂದರ್ಭ ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಹೇಳಿದರು. ಕೊಡವರಿಗೆ ಸಾಂವಿಧಾನಿಕವಾಗಿ ದೊರಕಬೇಕಿರುವ ಜಿಯೋ ಪಾಲಿಟಿಕಲ್ ಅಟಾನಮಿ, ಬುಡಕಟ್ಟು ಸ್ಥಾನಮಾನ, ಕೊಡವ ಭಾಷೆಯನ್ನು ೮ನೇ ಶೆಡ್ಯೂಲ್ ಗೆ ಸೇರಿಸುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಈ ಸಂದರ್ಭ ಒತ್ತಾಯಿಸಲಾಯಿತು.

ಕಾರ್ಯಕ್ರಮದಲ್ಲಿ ಲೆ.ಕರ್ನಲ್ ಬಿ.ಎಂ ಪಾರ್ವತಿ, ಕೂಪದಿರ ಪುಷ್ಪ ಮುತ್ತಣ್ಣ, ಕೂಪದಿರ ಗಂಗವ್ವ, ಕೂಪದಿರ ಕಾವೇರಮ್ಮ, ನಯನ ಯಶ್ವಂತ್, ಬಾಚರಣಿಯಂಡ ಹ್ಯಾರಿ, ಕೂಪದಿರ ಮೋಹನ್, ಮಂದಪAಡ ಮನೋಜ್, ಕೂಪದಿರ ಸಾಬು, ಕೂಪದಿರ ರೋಶನ್, ಕೂಪದಿರ ಪ್ರಣಮ್, ಮಲ್ಲಜಿರ ಜನಮ್ ಬೋಪಣ್ಣ, ಮಲ್ಲಜಿರ ಆಯುಷ್ ಅಯ್ಯಣ್ಣ, ಯಶ್ವಂತ್ ಕುಮಾರ್ ಹಾಜರಿದ್ದರು.

ಪಂಜಿನ ಮೆರವಣಿಗೆ

ಗೋಣಿಕೊಪ್ಪಲು: ಹಲವಾರು ಬೇಡಿಕೆಯನ್ನು ಮುಂದಿಟ್ಟುಕೊAಡು ಸಿಎನ್‌ಸಿ ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಮುಂದಾಳತ್ವದಲ್ಲಿ ಗೋಣಿಕೊಪ್ಪ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು. ನಗರದ ಮುಖ್ಯ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿದ ಸಂಘಟನೆಯ ನೂರಾರು ಸದಸ್ಯರು ಬಸ್ ನಿಲ್ದಾಣದಲ್ಲಿ ಸಮಾಗಮಗೊಂಡರು. ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಹಕ್ಕೊತ್ತಾಯ ಮಂಡಿಸಿದರು. ಸಾರ್ವಜನಿಕರನ್ನು ಉದ್ದೇಶಿಸಿ ಎನ್.ಯು. ನಾಚಪ್ಪ ಮಾತನಾಡಿದರು. ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಸದಸ್ಯರುಗಳು ಪಾಲ್ಗೊಂಡಿದ್ದರು.