ನಾಪೋಕ್ಲು, ಇ. ೧೪: ಸಮೀಪದ ಕಕ್ಕಬ್ಬೆ-ಯವಕಪಾಡಿ ಗ್ರಾಮದ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನಡೆದು ಸಂಪನ್ನಗೊAಡಿತು.

ಪರಿಶಿಷ್ಟ ವರ್ಗದವರಿಂದ ಇಲ್ಲಿ ಪೂಜೆ ನಡೆಯುವುದು ವಿಶೇಷವಾಗಿದ್ದು, ಕೊಡೆಗೆ ದೇವರು ಬರುತ್ತದೆ ಎಂಬ ಪ್ರತೀತಿ ಇದ್ದು, ಅದನ್ನು ಹಿಡಿದು ನಿಲ್ಲಿಸಲಾಗುವುದಿಲ್ಲ ಎಂಬುದು ವಿಸ್ಮಯಕ್ಕೆ ಕಾರಣವಾಗಿದೆ. ಕರಿಚಾಮುಂಡಿ, ಚೌಂಡಿ , ಅಯ್ಯಪ್ಪ ಮತ್ತಿತರ ದೈವ ದರ್ಶನ ನಡೆಯಿತು.

ಅಂಜಪರವAಡ ಕುಟುಂಬದ ಮನೆಯಿಂದ ದೇವರ ತಿರುವಾಭರಣ ಭಂಡಾರ ದೇವಾಲಯಕ್ಕೆ ತರಲಾಯಿತು.

ಬಳಿಕ ದೇವರ ಮೂರ್ತಿಯನ್ನು ಸ್ವಚ್ಛಗೊಳಿಸಿ ತೆಂಗಿನಕಾಯಿ ನೀರು ಹಾಗೂ ಎಳನೀರಿನಿಂದ ಅಭಿಷೇಕ ಮಾಡಿ ಚಿನ್ನಾಭರಣ ಮತ್ತು ಹೂಗಳಿಂದ ಶೃಂಗರಿಸಿದ ನಂತರ ದೇವರನ್ನು ಹೊತ್ತು ಪ್ರದಕ್ಷಣೆ ಬರಲಾಯಿತು. ಈ ಸಂದರ್ಭ ಕೊಡೆಯನ್ನು ಹಿಡಿದು ದೇವಾಲಯದಲ್ಲಿ ಪ್ರದಕ್ಷಿಣೆ ಬರಲಾಯಿತು.