ಮಡಿಕೇರಿ, ಏ. ೧೪: ಅಂಬೇಡ್ಕರ್ ಭವನ ಸಮಿತಿ ಹಾಗೂ ಅಶೋಕಪುರ ಅನ್ನಪೂಣೇಶ್ವರಿ ಸಮುದಾಯ ಭವನ ಸಮಿತಿ ವತಿಯಿಂದ ನಗರದ ಕೊಡಗು ವಿದ್ಯಾಲಯ ಮೈದಾನದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿವಿಧ ಕ್ರೀಡಾಕೂಟಗಳು ನಡೆದವು.
ಅಂಬೇಡ್ಕರ್ ಭವನ ಸಮಿತಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಹಾಗೂ ಅನ್ನಪೂರ್ಣೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಎಂ. ಜಯರಾಮ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಅಶೋಕಪುರ ಹಾಗೂ ಇಬ್ನಿವಳವಾಡಿ ಭಾಗದ ನಿವಾಸಿಗಳಿಗಾಗಿ ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ಕಬಡ್ಡಿ, ಸಂಗೀತ ಕುರ್ಚಿ, ಓಟ, ಸೈಕಲ್ ರೇಸ್ ಸೇರಿದಂತೆ ಪುಟಾಣಿ ಮಕ್ಕಳಿಗೆ ಕಾಳು ಹೆಕ್ಕುವುದು, ವಿವಿಧ ಕ್ರೀಡಾಕೂಟ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ಹೆಚ್.ಆರ್. ಮುತ್ತಪ್ಪ, ಹೆಚ್.ಕೆ. ಧರ್ಮೇಂದ್ರ, ಹೆಚ್.ಟಿ. ಶ್ಯಾಂ, ಹೆಚ್.ವಿ. ವೆಂಕಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.