ಮಡಿಕೇರಿ, ಏ. ೧೪; ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ನಡುವಿನ ಗೌಡ ಕುಟುಂಬ ಕಲರವ ಕ್ರಿಕೆಟ್ ಪಂದ್ಯಾವಳಿಯಲ್ಲಿAದು ನಡೆದ ಆಟದಲ್ಲಿ ಅಮೆಮನೆ ಹಾಗೂ ಪೊನ್ನಚನ ಕುಟುಂಬ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ.

ಇAದು ನಡೆದ ಪಂದ್ಯಾಟದಲ್ಲಿ ಹುದೇರಿ ತಂಡ ನಿಗದಿತ ೬ ಓವರ್‌ಗಳಲ್ಲಿ ೯ ವಿಕೆಟ್ ಕಳೆದುಕೊಂಡು೩೯ ರನ್ ಗಳಿಸಿದರೆ, ಪೊಡನೋಳನ ತಂಡ ೪.೧ ಓವರ್‌ಗಳಲ್ಲಿ ೩ ವಿಕೆಟ್ ನಷ್ಟದಲ್ಲಿ ೪೨ ರನ್ ಗಳಿಸಿ ಗೆಲುವು ಸಾಧಿಸಿತು. ಕಾಳೆಯಂಡ ತಂಡ ೪ ವಿಕೆಟ್‌ಗೆ ೬೮ ರನ್ ಗಳಿಸಿದರೆ,ಚಂಡಿರ ತಂಡ ೪ ವಿಕೆಟ್ ನಷ್ಟಕ್ಕೆ ೪೦ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಬಿಟ್ಟಿರ ತಂಡ ೫ ವಿಕೆಟ್‌ಗೆ ೨೩ ರನ್ ಗಳಿಸಿದರೆ ಅಮೆಮನೆ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಪೊನ್ನಚನ ತಂಡ ೬ ವಿಕೆಟ್‌ಗೆ ೫೯ ರನ್ ಗಳಿಸಿದರೆ ಕಾಳೆಯಂಡ ತಂಡ ೬ ವಿಕೆಟ್‌ಗೆ ೩೨ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಬೈಮನ ತಂಡ ೪ ವಿಕೆಟ್‌ಗೆ ೪೪ ರನ್ ಗಳಿಸಿದರೆ ಪೊಡನೋಳನ ತಂಡ ೪ ಓವರ್‌ನಲ್ಲಿ ೩ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಅಮೆಮನೆ ತಂಡ ೫ ವಿಕೆಟ್‌ಗೆ ೪೫ ರನ್ ಗಳಿಸಿದರೆ ನಿಡ್ಯಮಲೆ ತಂಡ ೭ ವಿಕೆಟ್ ಕಳೆದುಕೊಂಡು ೩೪ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಪೊನ್ನಚನ ತಂಡ ೫ ವಿಕೆಟ್‌ಗೆ ೫೯ ರನ್ ಗಳಿಸಿದರೆ ಪೊಡನೋಳನ ತಂಡ ೪ ವಿಕೆಟ್‌ಗೆ ೫೨ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪೊನ್ನಚನ ಪ್ರಿಕ್ವಾರ್ಟರ್‌ಗೆ ಪ್ರವೇಶ ಪಡೆಯಿತು.

ಕಡ್ಲೇರ ತಂಡ ೪ ವಿಕೆಟ್‌ಗೆ ೫೬ ರನ್ ಗಳಿಸಿದರೆ, ಕುಂಬಳಚೇರಿ ತಂಡ ೩ ವಿಕೆಟ್‌ಗೆ ೪೫ ರನ್ ಗಳಿಸಿ ಸೋಲನುಭವಿಸಿತು. ಕಡ್ಲೇರ ತಂಡ ೫ ವಿಕೆಟ್‌ಗೆ ೩೪ ರನ್ ಗಳಿಸಿದರೆ, ಅಮೆಮನೆ ತಂಡ ೧ ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಇದರೊಂದಿಗೆ ಅಮೆಮನೆ ತಂಡ ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತು.