ಮಡಿಕೇರಿ, ಏ.೧೪: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆ ೧೦ ದಿನಗಳನ್ನು ಪೂರೈಸಿದ್ದು, ಪ್ರತಿನಿತ್ಯವೂ ಕನಿಷ್ಟ ಒಂದು ಹ್ಯಾಟ್ರಿಕ್ ಸಾಧನೆಯಾಗಿದೆ. ಇಂದು ನಡೆದ ಮೊದಲ ಪಂದ್ಯದಲ್ಲಿ (ಮುಕ್ಕಾಟಿರ(ಪುಲಿಕೋಟು) - ಮಾಪಂಗಡ) ಮುಕ್ಕಾಟಿರಕ್ಕೆ ವಾಕ್‌ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು.
ಮಣವಟ್ಟಿರ ತಂಡವು ಅಜ್ಜಮಾಡ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ಚಂಗುಲAಡ ತಂಡವು ಆಪಾಡಂಡ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು. ಕೆಲೇಟಿರ ತಂಡವು ಬೇಪಡಿಯಂಡ ತಂಡವನ್ನು ೧-೦ ಗೋಲುಗಳಿಂದ ಮಣಿಸಿತು. ಸೋಮೆಯಂಡ ತಂಡವು ಗಾಂಡAಗಡ ತಂಡದ ವಿರುದ್ಧ ೫-೦ ಅಂತರದಲ್ಲಿ ಜಯ ಸಾಧಿಸಿತು. ಪಳಂಗAಡ ತಂಡವು ಪಾಲಂದಿರವನ್ನು ೨-೦ ಗೋಲುಗಳಿಂದ ಸೋಲಿಸಿತು.
ಕನ್ನಂಡ ತಂಡವು ಬಲ್ಟಿಕಾಳಂಡ ತಂಡದ ವಿರುದ್ಧ ೬-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮುಂಡಿಯೋಳAಡ ತಂಡವು ಅಲ್ಲಾರಂಡ ತಂಡದ ವಿರುದ್ಧ ೨-೧ ಗೋಲುಗಳಿಂದ ಜಯ ಸಾಧಿಸಿತು. ಬಿದ್ದಾಟಂಡ ತಂಡವು ಚಪ್ಪಂಡ ತಂಡವನ್ನು ೪-೩ ಗೋಲುಗಳಿಂದ ಮಣಿಸಿತು. ಮಲ್ಲಾಜಿರ ತಂಡವು ಮುಕ್ಕಾಟಿರ(ಕುಂಜಿಲಗೇರಿ) ತಂಡವನ್ನು ೨-೦ ಗೋಲುಗಳಿಂದ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಶಿವಚಾಳಿಯಂಡ ತಂಡವು ಕರ್ತಚಿರ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು.
ಚಿಮ್ಮಣಮಾಡ ತಂಡವು ಕನ್ನಿಕಂಡ ತಂಡವನ್ನು ೨-೧ ಗೋಲುಗಳ ಅಂತರದಲ್ಲಿ ಮಣಿಸಿತು. ಮೈಂದಪAಡ ತಂಡವು ಕೇತಿರ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಪಾಡೆಯಂಡ ತಂಡವು ಬಾದುಮಂಡವನ್ನು ೩-೨ ಗೋಲುಗಳಿಂದ ಸೋಲಿಸಿತು. ಸುಳ್ಳಿಮಾಡ ಹಾಗೂ ಉಳ್ಳಿಯಡ ತಂಡಗಳ ನಡುವಿನ ಪಂದ್ಯದಲ್ಲಿ ಸುಳ್ಳಿಮಾಡಕ್ಕೆ ವಾಕ್‌ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು. ಕುಲ್ಲೇಟಿರ ತಂಡವು ಮುಂಡೋಟಿರ ತಂಡವನ್ನು ೩-೦ ಗೋಲುಗಳಿಂದ ಮಣಿಸಿತು. ಕೊಂಗೇಟಿರ ತಂಡವು ಬಡ್ಡಿರ ತಂಡವನ್ನು ೫-೦ ಗೋಲುಗಳಿಂದ ಸೋಲಿಸಿತು.
ಮಾರ್ಚಂಡ ತಂಡವು ಮಾಣಿರ ತಂಡದ ವಿರುದ್ಧ ೬-೦ ಗೋಲುಗಳಿಂದ ಗೆಲುವು ಸಾಧಿಸಿತು. ಮಾರ್ಚಂಡ ಪರ ಪಳಂಗಪ್ಪ ಹ್ಯಾಟ್ರಿಕ್ ಸಾಧನೆ ಗೈದರು. ಐಚೆಟ್ಟಿರ ಹಾಗೂ ಕುಂಡ್ರAಡ ತಂಡಗಳ ನಡುವಿನ ಪಂದ್ಯದಲ್ಲಿ ಐಚೆಟ್ಟಿರಕ್ಕೆ ವಾಕ್‌ಓವರ್ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ದೊರಕಿತು. ಬೊವ್ವೇರಿಯಂಡ ತಂಡವು ಬಾಳೆಕುಟ್ಟಿರ ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ಕೆÆಟ್ಟಂಗಡ ಹಾಗೂ ಮಾತಂಡ ತಂಡಗಳ ನಡುವಿನ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ ಮಾತಂಡ ಜಯ ಸಾಧಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು.