ಮಡಿಕೇರಿ, ಏ. ೧೩: ಮಡಿಕೇರಿ ಮಹದೇವಪೇಟೆ ಡಾ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ಶೀಘ್ರವೇ ಅಂಗನವಾಡಿ ಕೇಂದ್ರದ ಕಟ್ಟಡವನ್ನು ನಿರ್ಮಿಸಲು ಸರಕಾರದಿಂದ ಅನುದಾನ ವನ್ನು ಮಂಜೂರು ಮಾಡಿಸಿ ಕೊಡುವುದಾಗಿ ಶಾಸಕ ಮಂತರ್ ಗೌಡ ಭರವಸೆ ನೀಡಿದರು.

ಬಡಾವಣೆಯಲ್ಲಿ ಅಂಗನ ವಾಡಿ ಕಟ್ಟಡ ನಿರ್ಮಾಣದ ಕುರಿತಂತೆ ಬಡಾವಣೆ ಸೌಹಾರ್ದ ಸಮಿತಿಯ ಅಧ್ಯಕ್ಷ ಎಂ.ಎ. ಸಾಧುಸಾದಿಕ್, ಉಪಾಧ್ಯಕ್ಷ ಎಂ.ಬಿ. ಕೌಸರ್, ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಶಾಸಕರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿಯನ್ನು ಆಲಿಸಿದ ಶಾಸಕ ಡಾ. ಮಂತರ್ ಗೌಡ, ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರಕ್ಕಾಗಿ ಕಟ್ಟಡದ ಅವಶ್ಯಕತೆಯಿದ್ದು, ತಾನು ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ್ ಅವರನ್ನು ಸಂಪರ್ಕಿಸಿ ಹಣಕಾಸಿನ ಮಂಜೂರಾತಿ ಮಾಡಿಸುವುದಾಗಿ ಭರವಸೆ ನೀಡಿದರು.