ಚೆಯ್ಯಂಡಾಣೆ, ಏ. ೧೪: ಸ್ಥಳೀಯ ನರಿಯಂದಡ ಶ್ರೀ ಭಗವತಿ ವಿಷ್ಣುಮೂರ್ತಿ ಹಾಗೂ ಕ್ಷೇತ್ರಪಾಲ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೧೭ ರಿಂದ ತಾ. ೨೧ರವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.

ತಾ. ೧೭ ರಂದು ಬೆಳಿಗ್ಗೆ ೧೦ ಗಂಟೆಗೆ ಮಹಾಗಣಪತಿ ಹೋಮ, ಪ್ರಸಾದ ವಿತರಣೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಚೆಯ್ಯಂಡ ಕುಟುಂಬದಿAದ ಭಂಡಾರ ಬರುವುದು, ಕೊಡಿಮರ ನಿಲ್ಲಿಸುವುದು, ದೇವಸ್ಥಾನಕ್ಕೆ ಮೂರು ಸುತ್ತು ಬಲಿ ಬರುವುದು, ಅಂದಿ ಬೆಳಕು, ನಂತರ ಮಹಾಪೂಜೆ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ. ತಾ. ೧೮ ರಂದು ಬೆಳಿಗ್ಗೆ ೭ ಗಂಟೆಗೆ ಇರುಬೆಳಕು (ದೇವರು ಹೊರಗೆ ಬರುವುದು,) ೧೦ ಗಂಟೆಗೆ ಚಂಡಿಕಾಹೋಮ, ೧೨ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ನೆರಪು ಬಲಿ, ದೇವರ ನೃತ್ಯ, ಮಹಾಪೂಜೆ ನಡೆಯಲಿದೆ.

ತಾ. ೧೯ಕ್ಕೆ ಬೆಳಿಗ್ಗೆ ೧೦.೩೦ ಗಂಟಗೆ ಎತ್ತು ಪೋರಾಟ ನಂತರ ಅಲಂಕಾರ ಪೂಜೆ, ಮಧ್ಯಾಹ್ನದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಶ್ರೀ ಭಗವತಿ ದೇವರ ಅವಭೃತ ಸ್ನಾನ (ಹೊಳೆಗೆ ಹೋಗುವುದು,) ಸಂಜೆ ೬ ಗಂಟೆಗೆ ದೇವರ ನೃತ್ಯ, ವಸಂತ ಪೂಜೆ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.

ತಾ. ೨೦ ರಂದು ೧೦ ಗಂಟೆಯ ನಂತರ ವಿಷ್ಣುಮೂರ್ತಿ ಮೇಲೆರೀಗೆ ಸೌದೆ ಕಡಿಯುವುದು, ಭಗವತಿ ದೇವರ ಸನ್ನಿಧಿಯಲ್ಲಿ ಕಳಶ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ ಕ್ಕೆ ಕ್ಷೇತ್ರಪಾಲ ಕೋಲ ಕ್ಷೇತ್ರಪಾಲ ಸನ್ನಿಧಿಯಲ್ಲಿ ನಡೆಯಲಿದೆ. ರಾತ್ರಿ ೯ ಗಂಟೆಯ ನಂತರ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಿವಿಧ ದೈವ ಕೋಲವು ನಡೆಯಲಿದೆ.

ತಾ. ೨೧ ರಂದು ೧೦ ಗಂಟೆಗೆ ವಿಷ್ಣು ಮೂರ್ತಿ ಕೋಲ ನಡೆಯಲಿದೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೭ ಗಂಟೆಯ ನಂತರ ವಿಷ್ಣುಮೂರ್ತಿ ದೇವರ ಪ್ರಸಾದ (ಭಾರಣಿ) ವಿತರಣೆ ನಡೆಯಲಿದೆ.