ಮಡಿಕೇರಿ ಏ. ೧೪ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಅರೆಭಾಷೆ ಹಾಸ್ಯ ಲೇಖನ ಸ್ಪರ್ಧೆ ನಡೆಸಲು ಉದ್ದೇಶಿಸಲಾಗಿರುತ್ತದೆ.

ಅರೆಭಾಷೆ ಹಾಸ್ಯ ಲೇಖನ ಸ್ವಂತ ರಚನೆಯಾಗಿರಬೇಕು, ಬೇರೆ ಎಲ್ಲೂ ಪ್ರಕಟವಾಗಿರಬಾರದು, ಕನಿಷ್ಟ ಐದುನೂರು ಪದಗಳಿದ್ದು, ಒಂದು ಸಾವಿರ ಪದ ಮೀರಬಾರದು, ಹೊಸ ಆಲೋಚನೆ, ಹೊಸ ಹೊಳಹುಗಳ ಬರಹವಾಗಿರಬೇಕು. ಹಾಸ್ಯ ಲೇಖನಕ್ಕೆ ಪ್ರಥಮ ಬಹುಮಾನ ೫,೦೦೦, ದ್ವಿತೀಯ ಬಹುಮಾನ ೩,೦೦೦ ಹಾಗೂ ತೃತೀಯ ಬಹುಮಾನ ೨,೦೦೦ ಒಳಗೊಂಡಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ. ಬರಹ ಕಳುಹಿಸಲು ಮೇ ೧೦ ಅಂತಿಮ ದಿನವಾಗಿದೆ. ಬರಹಗಳನ್ನು ಅಂಚೆ ಮೂಲಕ ಅಥವಾ ಅಕಾಡೆಮಿ ವಾಟ್ಸಾö್ಯಪ್ ಸಂಖ್ಯೆ ೬೩೬೨೫೨೨೬೭೭ ಮೂಲಕ ಅಥವಾ ಇ-ಮೇಲ್ ಚಿಡಿebಚಿseಚಿಛಿಚಿಜemಥಿ@gmಚಿiಟ.ಛಿom ಮೂಲಕ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ರಿಜಿಸ್ಟಾçರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. ಮೊ.ನಂ ೬೩೬೨೫೨೨೬೭೭ ಸಂಪರ್ಕಿಸಬಹುದು ಎಂದು ಅಕಾಡೆಮಿ ರಿಜಿಸ್ಟಾçರ್ ಅವರು ಕೋರಿದ್ದಾರೆ.