ಗೋಣಿಕೊಪ್ಪಲು. ಏ. ೧೩: ಅಖಿಲ ಕೊಡವ ಸಮಾಜದ ನೂತನ ಕಾರ್ಯಕಾರಿಣಿ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ನಿವಾಸದ ಕಚೇರಿಯಲ್ಲಿ ಭೇಟಿಯಾಗುವ ಮೂಲಕ ಶಾಸಕರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ಕೊಡವ ಅಭಿವೃದ್ಧಿ ನಿಗಮದ ಸ್ಥಾಪನೆಗೆ ಹಾಗೂ ಅನುಷ್ಠಾನಗೊಳಿಸುವಲ್ಲಿ ಶಾಸಕರ ಪ್ರಯತ್ನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಯಿತು. ಅಖಿಲ ಕೊಡವ ಸಮಾಜದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಅಖಿಲ ಕೊಡವ ಸಮಾಜದ ಅಧ್ಯಕ್ಷÀ ಪರದಂಡ ಸುಬ್ರಮಣಿ ಕಾವೇರಪ್ಪ, ಗೌರವ ಕಾರ್ಯದರ್ಶಿ ಚೊಟ್ಟಂಡ ಪ್ರಭು ಸೋಮಯ್ಯ, ಜಂಟಿ ಕಾರ್ಯದರ್ಶಿಗಳಾದ ಚೇಂದ್ರಿಮಾಡ ಪೃಥ್ವಿ ,ಮನ್ನೇರ ಸರಸ್ವತಿ ರಮೇಶ್, ಖಜಾಂಚಿ ಕಾಯಪಂಡ ಸುನೀಲ್ ಮತ್ತು ಅಖಿಲ ಕೊಡವ ಸಮಾಜದ ಕಾನೂನು ಸಲಹೆಗಾರ ಕುಟ್ಟಂಡ ವಿಜಯ್ ಉತ್ತಪ್ಪ ಭಾಗಿಯಾಗಿದ್ದರು.