ಚೆಯ್ಯಂಡಾಣೆ, ಏ. ೧೩ : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಶಿಕ್ಷಣ ಮಂಡಳಿಯ ಮದರಸ ಪರೀಕ್ಷೆಯಲ್ಲಿ ೭ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ತ್ಯಾಗತ್ತೂರ್ ನೂರಲ್ ಇಸ್ಲಾಂ ಮದರಸದ ೭ನೇ ತರಗತಿ ವಿದ್ಯಾರ್ಥಿನಿ, ರಂಶಾದ್ ಹಾಗೂ ಸಪೂರ ದಂಪತಿಯ ಪುತ್ರಿ ಶಿಫಾ ಫಾತಿಮಾ ೬೦೦ಕ್ಕೆ ೫೯೮ ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ಈಕೆಯನ್ನು ಮದರಸ ವತಿಯಿಂದ ಸನ್ಮಾನಿಸಲಾಯಿತು ಈ ಸಂದರ್ಭ ಖತೀಬ್ ರಿಯಾಜ್ ಫಾಲಿಳಿ, ಜಮಾಅತ್ ಅಧ್ಯಕ್ಷರಾದ ಹನೀಫಾ ಎ.ಎಂ, ಕಾರ್ಯದರ್ಶಿ ಹನೀಫಾ ಕೆ.ಎಂ, ಮುಖ್ಯೋಪಾಧ್ಯಾಯರಾದ ಜಾಫರ್ ಮಿಸ್ಬಾಹಿ, ಸ್ವಲಾತ್ ಕಮಿಟಿ ಅಧ್ಯಕ್ಷ ಹಂಝ, ಕಾರ್ಯದರ್ಶಿ ಹಂಝ ಕೆ.ಎಂ,ಎಸ್ ವೈಎಸ್ ಅಧ್ಯಕ್ಷ ಅಬ್ದುಲ್ ರಹ್ಮನ್, ಕಾರ್ಯದರ್ಶಿ ನೌಫಲ್,ಮದರಸ ಅಧ್ಯಾಪಕರಾದ ಹನೀಫಾ ಎ.ಎಂ, ಶಾಫಿ ಮುಸ್ಲಿಯಾರ್, ಎಸ್.ಎಸ್.ಎಫ್. ಪದಾಧಿಕಾರಿಗಳು, ಜಮಾಅತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.