ಮಡಿಕೇರಿ, ಏ. ೧೩: ವೀರಾಜಪೇಟೆ ತಾಲೂಕಿನ ಕಣ್ಣಂಗಾಲ ಒಕ್ಕಲಿಗರ ಸಂಘದಿAದ ಒಕ್ಕಲಿಗ ಸಮುದಾಯದವರಿಗಾಗಿ ವಿವಿಧ ಕ್ರೀಡಾಕೂಟಗಳು ತಾ. ೧೯ ರಂದು ನಡೆಯಲಿವೆ. ಅಮ್ಮತ್ತಿ ಒಂಟಿಯAಗಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಗ್ಗೆ ೧೦ಗಂಟೆಗೆ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಎಸ್ ಗೋಪಾಲಕೃಷ್ಣ ವಹಿಸಲಿದ್ದಾರೆ. ಕಣ್ಣಂಗಾಲ ಗ್ರಾಮದವರಾದ, ಹೊಳೆನರಸೀಪುರ ಚೆಸ್ಕಾಂ ಅಭಿಯಂತರ ಕೆ.ಕೆ ಮೋಹನ್ ಕುಮಾರ್ ಹಾಗೂ ವೀರಾಜಪೇಟೆ ತಾ.ಪಂ. ವ್ಯವಸ್ಥಾಪಕ ಕೆ.ಆರ್ ಸ್ವರೂಪ ಉದ್ಘಾಟಿಸಲಿದ್ದಾರೆ. ಪುರುಷರಿಗೆ ವಾಲಿಬಾಲ್, ಬಾಂಬ್ ಇನ್ ದ ಸಿಟಿ, ಮಹಿಳೆಯರಿಗೆ ಥ್ರೋಬಾಲ್, ಬಾಲಕ ಮತ್ತು ಬಾಲಕಿಯರಿಗೆ ೪ ರಿಂದ ೬ವರ್ಷದವರಿಗೆ ೧೦೦ ಮೀಟರ್ ಓಟ, ೭ ರಿಂದ ೧೨ ವರ್ಷದವರಿಗೆ ೧೦೦ಮೀ ಓಟ ಮತ್ತು ೧ ರಿಂದ ೩ ವರ್ಷದವರೆಗಿನ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ೧೩ರಿಂದ ೧೮ವರ್ಷದ ಬಾಲಕ-ಬಾಲಕಿಯರಿಗೆ ೧೦೦ಮೀ ಓಟದ ಸ್ಪರ್ಧೆ ನಡೆಯಲಿದೆ.

ಕಣ್ಣಂಗಾಲ ಒಕ್ಕಲಿಗರ ಸಂಘದ ವ್ಯಾಪ್ತಿಗೆ ಒಳಪಡುವ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ, ಸಮಾಜ ಸೇವಕ ಹರಪಳ್ಳಿ ರವೀಂದ್ರ, ಮೈಸೂರು ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕ ಈ. ಪ್ರಕಾಶ್ ಅವರು ಭಾಗವಹಿಸಲಿದ್ದಾರೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.