ಕುಶಾಲನಗರ, ಏ. ೧೨: ಶನಿವಾರ ತಡರಾತ್ರಿಯಲ್ಲಿ ಸಮಯದಲ್ಲಿ ಕುಶಾಲನಗರ ಮಡಿಕೇರಿ ರಸ್ತೆ ಆನೆಕಾಡು ಸಮೀಪ ರಸ್ತೆ ಅಪಘಾತ ಸಂಭವಿಸಿದೆ.
ದುರಸ್ತಿಗಾಗಿ ನಿಲ್ಲಿಸಿದ್ದ ಕ್ಯಾಂಟರ್ ಲಾರಿಗೆ ಹಿಂದಿನಿAದ ಕಾರು ಡಿಕ್ಕಿ ಹೊಡೆದ ಪರಿಣಾಮ ಭೀಕರ ಘಟನೆ ನಡೆದಿದ್ದು ಕಲ್ಲೂರು ಗ್ರಾಮದ ನಿವಾಸಿ ಹರೀಶ್ (೪೨) ಎಂಬವರು ಮೃತಪಟ್ಟಿದ್ದಾರೆ.
ಕುಶಾಲನಗರದಿಂದ ೭ನೇ ಹೊಸಕೋಟೆ ಬಳಿ ಕಲ್ಲೂರು ಗ್ರಾಮದಲ್ಲಿರುವ ತನ್ನ ಮನೆಗೆ ವ್ಯಾಗನಾರ್ ಕಾರಿನಲ್ಲಿ (ಏಂ೦೩ಒಃ೨೫೭೦) ಪ್ರಯಾಣಿಸುತ್ತಿದ್ದ ಸಂದರ್ಭ ಈ ದುರಂತ ನಡೆದಿದೆ. ಹರೀಶ್ ಸ್ಥಳದಲ್ಲೇ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ.
ಮೃತ ಹರೀಶ್ ಸ್ಥಳೀಯ ಕೆಲವು ಕಿರುಚಿತ್ರದಲ್ಲಿ ನಟಿಸಿದ್ದಾರೆ. ಮೃತ ಹರೀಶ ಪತ್ನಿ, ಓರ್ವ ಪುತ್ರಿ ಓರ್ವ ಪುತ್ರನನ್ನು ಅಗಲಿದ್ದಾರೆ.
ಅಪಘಾತದ ಮಾಹಿತಿ ತಿಳಿದ ಕೂಡಲೇ ಕುಶಾಲನಗರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದು ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.