ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಏ. ೧೨: ೧೯೯೭ರ ಇಸವಿಯಲ್ಲಿ ಪಾಂಡAಡ ಕಪ್‌ನ ಮೂಲಕ ಪ್ರಾರಂಭಗೊAಡ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಉತ್ಸವ ರಾಷ್ಟç ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯುವುದರೊಂದಿಗೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರಿದಂತೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲೂ ವಿಶ್ವದಾಖಲೆ ನಿರ್ಮಿಸಿರುವುದು ಗಮನಾರ್ಹವಾದದ್ದು. ೬೦ ಕುಟುಂಬಗಳ ಪಾಲ್ಗೊಳ್ಳುವಿಕೆೆಯೊಂದಿಗೆ ಪ್ರಾರಂಭಗೊAಡ ಈ ಹಾಕಿ ನಮ್ಮೆ ಕೊಡವ ಕುಟುಂಬಗಳ ನಡುವೆ ಮಾತ್ರವಲ್ಲ ಇಡೀ ಕೊಡಗಿನಲ್ಲಿ ಕ್ರೀಡಾ ಸಂಚಲನ ಮೂಡಿಸಿರುವುದು ಜಿಲ್ಲೆಗೆ ಹೆಮ್ಮೆಯೂ ಆಗಿದೆ. ೬೦ ರಿಂದ ಸರಿಸುಮಾರು ೪೦೦ ಕುಟುಂಬಗಳ ಪಾಲ್ಗೊಳ್ಳುವಿಕೆಯ ಹಂತಕ್ಕೆ (ಅತ್ಯಧಿಕ ೩೯೬) ಈ ಹಾಕಿ ಉತ್ಸವ ಬೆಳೆದು ಬಂದಿರುವುದರ ಯಶಸ್ಸಿನ ಹಿಂದೆ ಹಲವು ಯಶೋಗಾಥೆಗಳಿರುವ ಐತಿಹ್ಯವೂ ಆಗಿದೆ.

ಇದೀಗ ಕಳೆದ ವರ್ಷ ಮಡಿಕೇರಿಯಲ್ಲಿ ಜರುಗಿದ ಬೆಳ್ಳಿಹಬ್ಬ ಸಂಭ್ರಮವಾಗಿದ್ದ ಮುದ್ದಂಡ ಕಪ್ ಹಾಕಿ ಉತ್ಸವದ ಮೂಲಕ ಹೊಸತೊಂದು ಇತಿಹಾಸ ಸೃಷ್ಟಿಯ ಹೆಜ್ಜೆಇಡಲಾಗಿದೆ. ಕಳೆದ ವರ್ಷ ಹಾಕಿ ಉತ್ಸವದ ನಡುವೆ ಹೊಸ ಆಕರ್ಷಣೆಯಾಗಿ ಮುದ್ದಂಡ ಕುಟುಂಬಸ್ಥರು, ಕಾರ್ಯಾಧ್ಯಕ್ಷರಾಗಿದ್ದ ಯುವಕ ರಶಿನ್ ಸುಬ್ಬಯ್ಯ ಅವರ ಪರಿಕಲ್ಪನೆಯಂತೆ ಕೊಡವ ಮಹಿಳೆಯರಿಗೆ ಆಯೋಜನೆ ಮಾಡಿದ್ದ ಮಹಿಳಾ ಹಾಕಿ ಪಂದ್ಯಾಟವೂ ಯಶಸ್ಸು ಕಂಡಿದೆ.

ಇದೊಂದು ವಿಶಿಷ್ಟ ರೀತಿಯ ಆದರೆ ಅತ್ಯಂತ ರೋಮಾಂಚನಕಾರಿಯಾಗಿ ಮಹಿಳಾ ತಂಡಗಳ ನಡುವೆ ಮನರಂಜನೀಯವಾಗಿಯೂ, ತೀರ ಪೈಪೋಟಿಯುತವಾಗಿಯೂ ನಡೆಯುವ ಪಂದ್ಯಾವಳಿಯಾಗಿದೆ. ೭೦x೧೨೦ ಸುತ್ತಳತೆಯ ಮೈದಾನದಲ್ಲಿ ಗೋಲ್ ಕೀಪರ್ ರಹಿತವಾಗಿ ಈ ಪಂದ್ಯ ನಡೆಯುತ್ತದೆ. ಒಂದು ಹಾಕಿ ಸ್ಟಿಕ್‌ನಷ್ಟ ಎತ್ತರ, ಒಂದೂವರೆ ಸ್ಟಿಕ್‌ನಷ್ಟು ಅಗಲದ ಸಣ್ಣದಾದ ಗೋಲು ಪೆಟ್ಟಿಗೆ, ಸೆಂಟ್ರಲ್ ಲೈನ್‌ನಿಂದ ೬೦ ಅಡಿ ಉದ್ದದ ಮೈದಾನ (ಒಂದು ಬದಿ) ದಲ್ಲಿ ಮಹಿಳೆಯರ, ಯುವತಿಯರ ಹಾಕಿ ಕೌಶಲ್ಯ ತೋರಿಸಲು ಇದು ವೇದಿಕೆಯಾಗಿದೆ. ಐವರು ಆಟಗಾರರು (ಹೆಚ್ಚುವರಿ ಮೂರು) ಒಂದು ತಂಡದಲ್ಲಿರಬಹುದು. ಮತ್ತೊಂದು ವಿಶೇಷ ಎಂದರೆ ಹಿಟ್ ಇಲ್ಲ. ಟ್ಯಾಪ್ ಇಲ್ಲ..ಸ್ಲಾö್ಯಪ್ ಇಲ್ಲ. ಸ್ಕೂಪಿಂಗ್ ಇಲ್ಲ..ಕೇವಲ ಪುಷಿಂಗ್, ಡ್ರಿಬ್ಲಿಂಗ್ ಸಣ್ಣಪ್ರಮಾಣದ ಟ್ಯಾಪ್ ಮಾತ್ರದ ನಿಯಮದೊಂದಿಗೆ ಈ ಹಾಕಿ ಪಂದ್ಯ ರೋಚಕತೆಯೊಂದಿಗೆ, ಮನರಂಜನಾತ್ಮಕವೂ ಆಗಿರುತ್ತದೆ.

ಪ್ರಥಮ ಪ್ರಯತ್ನ ಯಶಸ್ಸು

ಮುದ್ದಂಡ ಕಪ್‌ನಲ್ಲಿ ನಡೆದ ಈ ಪ್ರಥಮ ಪ್ರಯತ್ನ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಆರಂಭಿಕ ವರ್ಷದಲ್ಲಿ ೫೮ ಕುಟುಂಬ ತಂಡಗಳು ಭಾಗಿಯಾಗಿದ್ದವು ಮಾತ್ರವಲ್ಲದೆ ಕಳೆದ ಬಾರಿಯ ಈ ಪಂದ್ಯಾವಳಿ ಚೊಚ್ಚಲ ವರ್ಷದಲ್ಲೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ವಿಶ್ವದಾಖಲೆಗೂ ಪಾತ್ರವಾಗಿದೆ.

ಈ ವರ್ಷ ಇನ್ನಷ್ಟು ತಂಡಗಳು

೨೦೨೬ರ ಹಾಕಿ ಉತ್ಸವದ ಆಯೋಜಕರಾದ ಚೇನಂಡ ಕುಟುಂಬಸ್ಥರು ಮಹಿಳಾ ಹಾಕಿಯನ್ನು ಯಥಾಪ್ರಕಾರ ಮುಂದುವರೆಸಿದ್ದಾರೆ. ಈಗಾಗಲೇ ಸುಮಾರು ೬೩ರಷ್ಟು ಕುಟುಂಬಗಳು ಹೆಸರು ದಾಖಲಿಸಿಕೊಂಡಿದ್ದು, ಹೆಸರು ನೋಂದಾವಣೆಗೆ ಇನ್ನಷ್ಟು ಕಾಲಾವಕಾಶವೂ ಇದೆ.

ತಾಮನೆ - ಬಾಮನೆ

ಆಯಾ ಕುಟುಂಬವನ್ನು ಪ್ರತಿನಿಧಿಸುವ ಮಹಿಳೆಯರು ತಾವು ಮದುವೆಯಾಗಿರುವ ಕುಟುಂಬಕ್ಕೂ ಆಡಬಹುದು ಅಥವಾ ತವರುಮನೆ ತಂಡದ ಪರವಾಗಿಯೂ ಆಡಬಹುದು ಎಂಬುದು ಮತ್ತೊಂದು ವಿಶೇಷತೆ.

ಕಿಕ್ಕಿರಿದು ನೆರೆದ ಪ್ರೇಕ್ಷಕರು

ಇದೊಂದು ಚುಟುಕು ಹಾಕಿಯಂತೆ ಗಮನ ಸೆಳೆಯುತ್ತದೆ. ಇಲ್ಲಿ ಗೋಲು ಬಾರಿಸುವುದು, ಪೆನಾಲ್ಟಿ ಕಾರ್ನರ್, ಟೈಬ್ರೇಕರ್ ಆದಲ್ಲಿ ಗೋಲು ಬಾರಿಸುವಲ್ಲಿ ಇರುವ ನಿಯಮಗಳೂ ಮತ್ತೊಂದು ಆಕರ್ಷಣೆಯಾಗಿದೆ. ಈ ಕಾರಣದಿಂದಾಗಿ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಮನರಂಜನಾತ್ಮಕ-ರೋಚಕವಾದ ಈ ಹಾಕಿ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರೂ ಕಳೆದ ವರ್ಷ ಕಿಕ್ಕಿರಿದು ನೆರೆದಿದ್ದರು. ಪ್ರಥಮ ವರ್ಷ ಕಂಬೀರAಡ ಕುಟುಂಬ ವಿಜಯಶಾಲಿಯಾದರೆ, ಕೆಚ್ಚೆಟ್ಟಿರ (ಕಡಗದಾಳು) ತಂಡ ರನ್ರ‍್ಸ್ ಪ್ರಶಸ್ತಿ ಗಳಿಸಿತ್ತು. ಈ ಬಾರಿಯ ಮಹಿಳಾ ಹಾಕಿಯ ಪ್ರಾಯೋಜಕತ್ವ ನೀಡಲು ದೇಶವನ್ನು ಮಹಿಳಾ ಹಾಕಿಯಲ್ಲಿ ಪ್ರಥಮ ಬಾರಿಗೆ ಪ್ರತಿನಿಧಿಸಿದ್ದ ಕೊಡವ ಮಹಿಳೆ ಪಾಂಡAಡ ಪುಷ್ಪ ಸುಬ್ಬಯ್ಯ (ತಾಮನೆ : ಅಮ್ಮಾಟಂಡ) ಅವರು ಪ್ರಾಯೋಜಿಸುತ್ತಿದ್ದಾರೆ. ಕಳೆದ ವರ್ಷವೂ ಇವರು ನಾಲ್ವರು ಸಾಧಕರಿಗೆ ತಲಾ ರೂ. ೫೦ ಸಾವಿರದ ಕೊಡುಗೆ ನೀಡಿದ್ದರು.