ಚೆಯ್ಯಂಡಾಣೆ/ಕಡAಗ, ಏ. ೧೨: ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಹಾಗೂ ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್‌ಕೆಎಸ್‌ಎಸ್‌ಎಫ್) ಕಡಂಗ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಕಡಂಗ ಕೊಕ್ಕಂಡಬಾಣೆ ದರ್ಗಾ ಷರೀಫ್ ಆವರಣದ ಸಂಸುಲ್ ಉಲಮಾ ನಗರದಲ್ಲಿ ೫ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕೊಡಗು ಜಿಲ್ಲಾ ಖಾಝಿ ಸಯ್ಯದ್ ಮುಹಮ್ಮದ್ ಕೋಯಾ ಜಮಲುಲೈಲಿ ತಂಙಳ್ ನಿಖಾ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿ ಮಾತನಾಡಿ ಸಂಘಟನೆ ಹಮ್ಮಿಕೊಂಡ ವಿವಾಹ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಇಂದು ೫ ಕುಟುಂಬ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಇವರ ದಾಂಪತ್ಯ ಜೀವನ ಸುಖ ಸಮೃದ್ಧಿಯಿಂದ ಕೂಡಿರಲಿ, ಇಂತಹ ಕಾರ್ಯಕ್ರಮ ಇಲ್ಲದಿದ್ದರೆ ಬಡ ಮಕ್ಕಳು,ಅನಾಥರು ವಿವಾಹವಾಗಲು ಕಷ್ಟಸಾಧ್ಯ ಎಂದು ಆಶೀರ್ವಚನ ನೀಡಿದರು.

ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರತೀಕ್ ಪೊನ್ನಣ್ಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಎಲ್ಲಾ ಧರ್ಮೀಯರಿಗೆ ಅವರವರ ಧರ್ಮದ ಬಗ್ಗೆ ತಿಳುವಳಿಕೆ ಅತ್ಯಗತ್ಯ, ಅದಿಲ್ಲದಿರುವುದೇ ಇಂದು ಕೌಟುಂಬಿಕ ವಲಯದಲ್ಲಿ ಕಾಣುವ ಆಂತರಿಕ ಸಮಸ್ಯೆಗಳು ವಿವಾಹವಾಗಿ ದಿನಗಳ ಅಂತರದಲ್ಲಿ ವಿಚ್ಛೇದನ ಪಡೆಯುವ ಪ್ರಸಂಗಗಳು ವ್ಯಾಪಕವಾಗುತ್ತಿರುವುದು ಆದರ ಮುಂದುವರಿದ ಭಾಗವಷ್ಟೇ ನಾವು ಮಾನವನ ಸಂಕಷ್ಟಕ್ಕೆ ಮಿಡಿದರೆ ಇಡೀ ಮನುಕುಲವನ್ನು ಸಂರಕ್ಷಣೆ ಮಾಡಿದಂತೆ ನಾವು ಓರ್ವನಿಗೆ ಕೆಡುಕು ಬಯಸಿದರೆ ಇಡೀ ಮನುಕುಲವನ್ನು ಹಾದಿ ತಪ್ಪಿಸಿದಂತೆ ಎಂದರು. ಇಲ್ಲಿನ ಎಸ್‌ವೈಎಸ್ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಸಂಘಟನೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಹೆಮ್ಮೆ ಪಡುವಂತದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ೨೦೨೫ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪಡೆದ ಬೆಂಗಳೂರು ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿಪಿಐ) ಎಡಪಾಲದ ಕುಪ್ಪೋಡಂಡ ರಫೀಕ್ ನಾವು ನಮ್ಮ ಮನೆಯಲ್ಲಿ ಒಬ್ಬ ಮಗಳನ್ನು ಮದುವೆ ಮಾಡಬೇಕಾದರೆ ಕನಿಷ್ಠ ೧೦ರಿಂದ ೧೫ವರ್ಷ ತಯಾರಿಯಲ್ಲಿ ಇರುತ್ತೇವೆ, ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಅಂತಹದರಲ್ಲಿ ಈ ಒಂದು ಸಂಘಟನೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು.

ಕಡಂಗ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಮಾತನಾಡಿ ಕಡಂಗದ ಹೃದಯವಂತ ಯುವಕರು ಸೇರಿ ಮಾಡುವಂತಹ ಈ ಕಾರ್ಯ ಮನುಕುಲವನ್ನೇ ಕುಲುಕುವಂತಹ ಕಾರ್ಯ,ನಮ್ಮ ನೆರೆಮನೆಯವರು ಚೆನ್ನಾಗಿರಬೇಕು,ಎಲ್ಲರೂ ಒಟ್ಟಿಗೆ ಒಳ್ಳೆಯ ಒಡನಾಟದಲ್ಲಿರಬೇಕು, ಕಳೆದ ನಾಲ್ಕು ವರ್ಷಗಳಿಂದ ಎಷ್ಟೋ ಹೆಣ್ಣು ಮಕ್ಕಳಿಗೆ ಬಾಳನ್ನು ಒದಗಿಸಿ ಕೊಟ್ಟ ಈ ಸಂಘಟನೆ ನಿಜಕ್ಕೂ ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫಾ, ವೀರಾಜಪೇಟೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಸಿ.ಎ. ನಾಸರ್, ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ಪ್ರಖ್ಯಾತ ವಾಗ್ಮಿ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಪುರಂ ಧಾರ್ಮಿಕ ಮತ ಪ್ರವಚನ ನಡೆಸಿ ಮಾತನಾಡಿ ದಾನ ಧರ್ಮ ಬಹುಮುಖ್ಯ,ಬಡ ಹೆಣ್ಣು ಮಗಳ ಸಂಕಷ್ಟವನ್ನು ಅರಿತು ಸಂಘಟಕರು ಆಯೋಜಿಸುವ ಇಂತಹ ಕಾರ್ಯಕ್ರಮ ಹೆಮ್ಮೆಯದ್ದು ಎಲ್ಲಾ ದಾನಿಗಳು ಮುಂದೆ ಬಂದು ಇಂತಹ ಕಾರ್ಯಕ್ರಮವನ್ನು ಪ್ರೋತ್ಸಾಹಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಆಯೋಜನೆಯಾಗಲಿ ಎಂದರು.

ಸಂಘಟನೆ ಕಳೆದ ೪ ವರ್ಷದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು ಈ ವರ್ಷ ೫ ಬಡ ಕುಟುಂಬದ ಜೋಡಿಗಳಿಗೆ ಕಂಕಣ ಭಾಗ್ಯ ನೀಡಿದ್ದಾರೆ.

ಈ ಬಾರಿ ಎಮ್ಮೆಮಾಡು, ಕೊಳಕೇರಿ, ಅಮ್ಮತ್ತಿ, ಕುಶಾಲನಗರ,ಬಲಮುರಿಯ ವಧುವನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ವಧು,ವರರಿಗೆ ಬೇಕಾದ ಮಾಂಗಲ್ಯ ಚಿನ್ನಾಭರಣ, ವಸ್ತç, ಕೈ ಗಡಿಯಾರವನ್ನು ಸಂಘಟನೆ ಉದಾರವಾಗಿ ನೀಡಲಾಗಿದೆ.

ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ.ಎA. ಅಬ್ದುಲ್ಲ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಡಂಗ ಮೊಯ್ಯದ್ದಿನ್ ಮಸೀದಿಯ ಖತೀಬ್ ಇರ್ಷಾದ್ ಮನ್ನಾನಿ ಕೊಲ್ಲಂ ಉದ್ಘಾಟಿಸಿ ಮಾತನಾಡಿದರು .

ಇದೆ ಸಂದರ್ಭ ಸಂಘಟನೆಯ ವತಿಯಿಂದ ಮುಖ್ಯಮಂತ್ರಿಗಳ ಪದಕ ಪಡೆದ ಡಿಟೆಕ್ಟಿವ್ ಪೊಲೀಸ್ ಇನ್ಸ್ಪೆಕ್ಟರ್ (ಡಿಪಿಐ) ಕುಪ್ಪೋಡಂಡ ರಫೀಕ್ ಎಡಪಾಲ ಹಾಗೂ ಎಸ್ ವೈಎಸ್ ಅಧ್ಯಕ್ಷ ಇಸಾಕ್ ರವರನ್ನು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಕೋಳುಮಂಡ,ಮೊಯ್ಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಕುಂಞಅಬ್ದುಲ್ಲ, ಕಡಂಗ ಬದ್ರಿಯಾ ಜಮಾಅತ್ ಅಧ್ಯಕ್ಷ ಉಸ್ಮಾನ್ ಕೆ.ಇ,ಎಡಪಾಲ ಜಮಾಅತ್ ಅಧ್ಯಕ್ಷ ಬಶೀರ್ ಹಾಜಿ, ಭಗವತಿ ದೇವಸ್ಥಾನ ಅಧ್ಯಕ್ಷ ಮುಕ್ಕಾಟಿರ ಶಂಕರು, ವಿಠಲ್, ಸುರೇಶ್, ವಿನು ಮಾದಪ್ಪ, ಕಣಿಯರ ಪ್ರಕಾಶ್, ನಡಿಕೇರಿಯಂಡ ಜೀವನ್, ಹಮೀದ್ ಮೌಲವಿ, ಉಮ್ಮರ್ ಫೈಝಿ ಎಡಪಾಲ, ಕೊಳಕೇರಿ ಮುದರ್ರಿಸ್ ಅಶ್ರಫ್ ಅಹ್ಸನಿ, ಹನೀಫಾ ನಾಪೋಕ್ಲು, ಅಬೂಬಕ್ಕರ್ ನಾಪೋಕ್ಲು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಬೈರ್, ಮಮ್ಮದ್, ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಹ್ಮನ್, ಕೋಶಾಧಿಕಾರಿ ಸಲಾಂ, ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಉಪಾಧ್ಯಕ್ಷ ತಮ್ಲಿಕ್ ದಾರಿಮಿ, ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಸುಹೈಬ್ ಫೈಝಿ, ಬದ್ರಿಯಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ರಜಾಕ್, ಕಡಂಗ ಎಸ್‌ವೈಎಸ್ ಅಧ್ಯಕ್ಷ ಮಾಹಿನ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಹಾರಿಸ್,ಉಪಾಧ್ಯಕ್ಷ ಯೂಸುಫ್, ಕೋಶಾಧಿಕಾರಿ ಅಬ್ದುಲ್ ರಹ್ಮನ್, ಎಸ್‌ಕೆಎಸ್‌ಎಸ್‌ಎಫ್ ಉಪಾಧ್ಯಕ್ಷ ಜುನೈದ್, ಕಾರ್ಯದರ್ಶಿ ಇಕ್ಬಾಲ್, ಕೋಶಾಧಿಕಾರಿ ಸಮದ್, ಶಾಫಿ ಎಡಪಾಲ ಹಾಗೂ ಸಂಘಟನೆಯ ಪ್ರಮುಖರು, ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಸಂಜೆ ಧ್ವಜಾರೋಹಣವನ್ನು ಮೊಯ್ಯದ್ದಿನ್ ಜಮಾಅತ್ ಅಧ್ಯಕ್ಷ ಕುಂಞ ಅಬ್ದುಲ್ಲ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಇಸಾಕ್ ಸಿ.ಇ. ಜಂಟಿಯಾಗಿ ನೆರವೇರಿಸಿದರು. ಎಂ.ಎA. ಅಬ್ದುಲ್ಲ ಫೈಝಿ ಪ್ರಾರ್ಥಿಸಿ, ಇಬ್ರಾಹಿಂ ಬಾದುಷಾ ಕೊಡ್ಲಿಪೇಟೆ ನಿರೂಪಿಸಿ, ಸುಬೈರ್ ಸಿ.ಇ. ಸ್ವಾಗತಿಸಿ, ಸುಹೈಬ್ ಫೈಝಿ ವಂದಿಸಿದರು.

ಅಶ್ರಫ್ / ನೌಫಲ್