ಸಿದ್ದಾಪುರ, ಏ. ೧೨: ಕ್ರೀಡೆಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದರು.
ಸಿದ್ದಾಪುರ ಪ್ರೌಢಶಾಲೆಯ ಮೈದಾನದಲ್ಲಿ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ ಸಿ.ಪಿ.ಎಲ್. ಆವೃತ್ತಿ-೧ರ ಕ್ರಿಕೆಟ್ ಪಂದ್ಯಾವಳಿಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ಯುವಕ, ಯುವತಿಯರ ಪ್ರತಿಭೆಗಳನ್ನು ಹೊರತರಲು ಸಹಕಾರಿ ಆಗುತ್ತಿದೆ ಎಂದರು.
ಇದೇ ಸಂದರ್ಭ ಕ್ರಿಕೆಟ್ ಆಯೋಜಕರಿಂದ ಶಾಸಕ ಪೊನ್ನಣ್ಣ ಅವರಿಗೆ ಸನ್ಮಾನ ನಡೆಯಿತು. ಮೂರು ದಿನಗಳ ಕಾಲ ನಡೆದ ಐ.ಪಿ.ಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಆರ್ಚ್ ಏಂಜಲ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಮಡಿಕೇರಿಯ ನ್ಯೂ ಸ್ಟಾರ್ ತಂಡವು ರನ್ರ‍್ಸ್ ಪ್ರಶಸ್ತಿ ಪಡೆಯಿತು. ತೃತೀಯ ಬಹುಮಾನವನ್ನು ಪೊನ್ನಂಪೇಟೆಯ ಅಪೋಲ್ಥ್÷್ಸಲ್ ತಂಡ, ೪ನೇ ಸ್ಥಾನವನ್ನು ಸಿದ್ದಾಪುರದ ಟ್ರಿನಿಟಿ ತಂಡ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್ , ಧರ್ಮಗುರುಗಳಾದ ಜೇಮ್ಸ್, ಸಿ.ಪಿ.ಎಲ್ ಅಧ್ಯಕ್ಷ ಜಾರ್ಜ್, ದಾನಿಗಳಾದ ಶಾಲು ಸಿಕ್ವೇರಾ, ಎ.ಜೆ. ಥೋಮಸ್, ಸ್ಕೌಟ್ ಅಂಡ್ ಗೈಡ್ಸ್ನ ಜಿಮ್ಮಿ ಸಿಕ್ವೇರಾ, ಟೋಮಿ ಥೋಮಸ್ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ದಾನಿಗಳಾದ ಅನಿಲ್, ಜೋಯ್, ಕುರಿಯನ್, ವಿಜೇಶ್, ಟಿ.ಪಿ. ಅನೀಸ್, ರ‍್ವಿನ್ ಲೋಬೊ, ರಂಜಿತ್, ಅಗಸ್ಟಿನ ಕುಶಾಲನಗರ, ಫ್ರಾನ್ಸಿಸ್, ನಿವೃತ್ತ ಶಿಕ್ಷಕಿ ಮೋಳಿ, ಕಾಂಗ್ರೆಸ್ ಪ್ರಮುಖರಾದ ಅಪ್ರು ರವೀಂದ್ರ, ಅನಿಲ್ ಸೀನಪ್ಪ, ಚೇಕು ಸೇರಿದಂತೆ ಇನ್ನಿತರರು ಹಾಜರಿದ್ದರು. ಜಿಮ್ಮಿ ಸ್ವಿಕೇರಾ ಸ್ವಾಗತಿಸಿ ಟೋಮಿ ಥೋಮಸ್ ಕಾರ್ಯಕ್ರಮ ನಿರೂಪಿಸಿದರು. ಶೈಕ್ಷಣಿಕ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಚರಿಷ್ಮಾ ಜಾನ್ಸನ್, ಸಿ.ಬಿ. ಫೌಲ್, ಸಾಜನ್ ಪೀಟರ್, ಆಶಿಕ್ ಕ್ರಿಸ್ಟಿ, ಕ್ವಿಂಟನ್ ಕೆನಿನ್, ಆಂಟೋನಿ ಡಿಸೋಜಾ, ಬಿಬಿನ್ ಸೆಬಾಸ್ಟಿಯನ್, ಜಿಮ್ಮಿ ಸಿಕ್ವೇರಾ, ಅರುನ್ ಕುಟಿಯನ್, ತೋಮಸ್, ಅನುಷಾ ಎಂ.ಜಿ. ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. - ವಾಸು