ಮಡಿಕೇರಿ ಏ. 10: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಕರಿನೆರವಂಡ, ಕೋಳೇರ ಹಾಗೂ ಕೊಟ್ಟಂಗಡ ತಂಡಗಳು ಭರ್ಜರಿ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದವು.

ಮೈದಾನ 1ರಲ್ಲಿ ಆಚೆಯಡ ಮತ್ತು ಕರಿನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕರಿನೆರವಂಡ 42 ರನ್‍ಗಳಿಂದ ಜಯ ಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರಿನೆರವಂಡ ತಂಡ 6 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು. ಆಚೆಯಡ 6 ಓವರ್‍ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 77 ರನ್‍ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು. ಚೇರಂಡ ಮತ್ತು ಕಾಯಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೇರಂಡ 9 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಾಯಪಂಡ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿತು. ಚೇರಂಡ 5.3 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 80 ರನ್ ಸೇರಿಸಿ ಪಂದ್ಯವನ್ನು ಗೆದ್ದುಕೊಂಡಿತು.

ಕಾಟಿಮಾಡ ಮತ್ತು ಬೊಳ್ಳೆಪಂಡ ನಡುವಿನ ಹಣಾಹಣಿಯಲ್ಲಿ ಬೊಳ್ಳೆಪಂಡ ತಂಡ 6 ವಿಕೆಟ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಾಟಿಮಾಡ 6 ಓವರ್‍ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 89 ರನ್ ಸೇರಿಸಿತು. ಬೊಳ್ಳೆಪಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿ ಗೆಲುವಿನ ನಗು ಬೀರಿತು.

ಐಚಂಡ (ದೇವಣಗೇರಿ) ಮತ್ತು ಅಣ್ಣಳಮಾಡ (ಬಿರುನಾಣಿ) ತಂಡಗಳ ನಡುವಿನ ಪಂದ್ಯದಲ್ಲಿ ಐಚಂಡ 8 ರನ್‍ಗಳಿಂದ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಣ್ಣಳಮಾಡÀ 6 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತು. ಐಚಂಡ 6 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 67 ರನ್ ಸೇರಿಸಿ ಪಂದ್ಯವನ್ನು ಗೆದ್ದುಕೊಂಡಿತು.

ಬೊಪ್ಪಡ್ತಂಡ ಮತ್ತು ಕೋಳೇರ ತಂಡಗಳ ನಡುವಿನ ಪಂದ್ಯದಲ್ಲಿ ಕೋಳೆರ 10 ವಿಕೆಟ್‍ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೊಪ್ಪಡ್ತಂಡ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು. ಕೋಳೆರ ಯಾವುದೇ ವಿಕೆಟ್ ನಷ್ಟವಿಲ್ಲದೆ 6 ಓವರ್‍ಗಳಲ್ಲಿ 55 ರನ್ ಗಳಿಸಿ ಜಯ ದಾಖಲಿಸಿತು.

ಮೈದಾನ 2ರಲ್ಲಿ ಗೌಡಂಡ (ಸೂರ್ಲಬ್ಬಿ) ಮತ್ತು ಕೊಟ್ಟಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಟ್ಟಂಗಡÀಕ್ಕೆ ಭರ್ಜರಿ 76 ರನ್‍ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಟ್ಟಂಗಡ 6 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 100 ರನ್‍ಗಳ ಬೃಹತ್ ಮೊತ್ತ ಸೇರಿಸಿತು. ಗೌಡಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಕೇವಲ 24 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕೊಟ್ರಮಾಡ ಮತ್ತು ಬುಟ್ಟಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಟ್ರಮಾಡ 5 ವಿಕೆಟ್‍ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬುಟ್ಟಿಯಂಡ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿತು. ಕೊಟ್ರಮಾಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 54 ರನ್‍ಗಳೊಂದಿಗೆ ಪಂದ್ಯವನ್ನು ಗೆದ್ದುಕೊಂಡಿತು.

ಬೊಟ್ಟೋಳಂಡ ಮತ್ತು ಕುಂಜಿಯಂಡ ನಡುವಿನ ಪಂದ್ಯದಲ್ಲಿ ಕುಂಜಿಯಂಡ 14 ರನ್‍ಗಳ ಗೆಲುವು ದಾಖಲಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕುಂಜಿಯಂಡ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿತು. ಬೊಟ್ಟೋಳಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 6 ಓವರ್‍ಗಳಲ್ಲಿ 79 ರನ್‍ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.

ಕೊಣಿಯಂಡ ಮತ್ತು ನಾಗಂಡ ನಡುವಿನ ಪಂದ್ಯದಲ್ಲಿ ಕೊಣಿಯಂಡ 31 ರನ್‍ಗಳ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೊಣಿಯಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 84 ರನ್ ಸೇರಿಸಿತು. ನಾಗಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿ ಸೋಲು ಕಂಡಿತು.

ಬೋಂದ ಮುಕ್ಕಾಟಿರ ಮತ್ತು ಕಂಬೀರಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಂಬೀರಂಡ 40 ರನ್‍ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಂಬೀರಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತು. ಬೋಂದ ಮುಕ್ಕಾಟಿರ 6 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 35 ರನ್‍ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು.