ಗೋಣಿಕೊಪ್ಪಲು, ಏ. 10: ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲುವಿನ ಅಥ್ಲಾನ್ ಟರ್ಫ್ ಮೈದಾನದಲ್ಲಿ ದೇವಣಗೇರಿ ಮುಕ್ಕಾಟಿರ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದ್ದು 3ನೇ ದಿನದ ಪಂದ್ಯಾವಳಿಯಲ್ಲಿ 17 ತಂಡಗಳು ಮುನ್ನಡೆ ಸಾಧಿಸಿದವು.
ಮೇಕೇರಿರ, ಕಳ್ಳಿಚಂಡ, ಮೊಣ್ಣಂಡ, ಮಲ್ಲಂಗಡ, ಮಾಚಿಮಂಡ, ಮಲ್ಲಮಾಡ, ಕೊಟ್ಟಂಗಡ (ಎ), ಮಚ್ಚಮಾಡ, ಚೇಂದಂಡ, ತೀತಿರ (ಹುದಿಕೇರಿ), ಮಾಚಿಮಾಡ (ಎ), ಕಲಿಯಂಡ, ಕೆಚ್ಚೆಟ್ಟಿರ, ಬಿದ್ದಂಡ, ಜಮ್ಮಡ, ಆದೇಂಗಡ, ಕುಟುಂಬದ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದವು. ಅರಮಣಮಾಡ, ಮಂಡೆಪಂಡ, ಚೆಕ್ಕೆರ (ಜೂನಿಯರ್ಸ್), ಕಾಡ್ಯಮಾಡ ಮೂಕೊಂಡ, ಕೋಡಿಮಣಿಯಂಡ, ಚೆಕ್ಕೆರ (ಸೀನಿಯರ್ಸ್), ಕಾವಡಿಚಂಡ, ಮಾಚಿಮಾಡ(ಬಿ), ದೇಯಂಡ, ಜಮ್ಮಡ (ಜೂನಿಯರ್ಸ್), ಆದೇಂಗಡ, ಕೀತಿಯಂಡ, ಕಡೇಮಾಡ, ಕಂಡ್ರತಂಡ, ಹೊಟ್ಟೆಂಗಡ, ಕುಟುಂಬದ ತಂಡಗಳು ಪಂದ್ಯಾವಳಿಯಿಂದ ಹೊರ ನಡೆದವು.
ತಾಂತ್ರಿಕ ವಿಭಾಗದಲ್ಲಿ ಮುಕ್ಕಾಟಿರ ನಿಕ್ಕಿ ಅಪ್ಪಚ್ಚು, ಮುಕ್ಕಾಟಿರ ಮಿಲನ್ ಅಪ್ಪಚ್ಚು, ಮುಕ್ಕಾಟಿರ ರೇಹಾ ಅಪ್ಪಚ್ಚು, ಮುಕ್ಕಾಟಿರ ಶೈಲಾ ನಂಜಪ್ಪ, ಮುಕ್ಕಾಟಿರ ಪವನ್ ನಂಜಪ್ಪ, ಮುಕ್ಕಾಟಿರ ನಿವ್ಯತಂಗಮ್ಮ, ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ ಹಾಗೂ ಮೂಕಚಂಡ ಸರಿತಾ ಬೊಳ್ಳಮ್ಮ ಕಾರ್ಯನಿರ್ವಹಿಸಿದರು.