ಕಣಿವೆ, ಏ. 8: ಯಡವನಾಡು ಗ್ರಾಮದ ಶಿವಬಸವೇಶ್ವರ ದೇವಾಲಯದ ಸಮೀಪ ಬುಧವಾರ ಮಧ್ಯಾಹ್ನ ವಿದ್ಯುತ್ ಅವಘಡ ಸಂಭವಿಸಿ ಫಸಲು ಕಟ್ಟಿದ್ದ ಅಡಿಕೆ ಮರಗಳು ಸುಟ್ಟ ಭಸ್ಮವಾಗಿರುವ ಪ್ರಸಂಗ ನಡೆದಿದೆ.
ಗ್ರಾಮದ ಪ್ರಗತಿಪರ ಕೃಷಿಕ ಪಾಣತ್ತಲೆ ಶಂಭು ಎಂಬವರಿಗೆ ಸೇರಿದ ಫಸಲು ಭರಿತ 20 ಕ್ಕೂ ಹೆಚ್ಚು ಅಡಿಕೆ ಮರಗಳು ಸುಟ್ಟು ಬೂದಿಯಾಗಿದ್ದು ನಷ್ಟ ಸಂಭವಿಸಿದೆ. ದಿಢೀರನೆ ಬೆಂಕಿ ಬಿದ್ದ ಪರಿಣಾಮ ಗ್ರಾಮಸ್ಥರ ಸಹಕಾರದಿಂದ ಹಾಗೂ ಕುಶಾಲನಗರ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ಆಗಮಿಸಿ ಅಗ್ನಿ ನಂದಿಸಿ ಹೆಚ್ಚಲಿದ್ದ ಬೆಂಕಿ ಅವಘಡವನ್ನು ತಪ್ಪಿಸಿದ್ದಾರೆ. ಕೃಷಿಕ ಪಾಣತ್ತಲೆ ಶಂಭು ಮಾತನಾಡಿ, ಬುಧವಾರ ಮಧ್ಯಾಹ್ನ ದಿಢೀರನೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ತೋಟಕ್ಕೆ ಬೆಂಕಿ ಹರಡಿತು. ಹಾಗಾಗಿ ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಫಸಲು ಮರಗಳು ಸಂಪೂರ್ಣ ಹಾನಿಯಾಗಿವೆ ಎಂದು ಅಳಲು ತೋಡಿಕೊಂಡರು. ಅಗ್ನಿಶಾಮಕ ಠಾಣಾಧಿಕಾರಿ ರಂಜಿತ್, ಸಿಬ್ಬಂದಿ ಸಂದೀಪ್, ಚೇತನ್ ಕುಮಾರ್, ಚಾಲಕ ಶಿವಾನಂದ್ ಆನಂದ್ ಸೇರಿದಂತೆ ಗ್ರಾಮಸ್ಥರಿದ್ದರು.