ತಲಕಾವೇರಿ, ಏ. 8: ಭಾಗಮಂಡಲ-ತಲಕಾವೇರಿ ಕ್ಷೇತ್ರಕ್ಕೆ ಉಡುಪಿಯ ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀ ಪಾದರು ಭೇಟಿ ನೀಡಿದರು. ಶ್ರೀಗಳು ತಮ್ಮ ಶಿಷ್ಯರೊಂದಿಗೆ ಈ ಎರಡೂ ಕ್ಷೇತ್ರಗಳಿಗೆ ತೀರ್ಥ ಸ್ನಾನಕ್ಕೆ ಆಗಮಿಸಿ ತಮ್ಮ ಪಟ್ಟದ ದೇವರ ಪೂಜೆಯನ್ನು ಕ್ಷೇತ್ರದ ಅರ್ಚಕ ಪ್ರಶಾಂತ್ ಆಚಾರ್ ಅವರ ನಿವಾಸದಲ್ಲಿ ನೆರವೇರಿಸಿದರು.

ಭಾಗಮಂಡಲದಲ್ಲಿ ತ್ರಿವೇಣಿ ಸಂಗಮಕ್ಕೆ ತೆರಳಿ ಭಗಂಡೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು. ದೇವಸ್ಥಾನದಲ್ಲಿ ಶ್ರೀಗಳನ್ನು ದೇವಾಲಯದ ಅರ್ಚಕರುಗಳಾದ ಹರೀಶ್ ಪುನೀಚಿತ್ತಾಯ, ವಿಕ್ರಂ ಭಟ್, ಸತೀಶ್ ಭಟ್ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.

ಎಸ್.ಎಸ್. ಸಂಪತ್ ಕುಮಾರ್, ಪ್ರಶಾಂತ್ ಆಚಾರ್, ಪುರುμÉೂೀತ್ತಮ್ ಭಟ್, ಸುಧಾಕರ್ ಭಟ್ ಮೊದಲಾದವರು ಹಾಜರಿದ್ದರು.