ಮಡಿಕೇರಿ, ಏ. 8: ಹೆಬ್ಬೆಟ್ಟಗೇರಿ ಗ್ರಾಮದ ಇಂದ್ರಪ್ರಸ್ಥನಗರದ ಶ್ರೀ ಕಲ್ಕುಡ, ಕಲ್ಲುರ್ಟಿ, ದೈವರಾಜ, ಗುಳಿಗ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಪಂಜುರ್ಲಿ ದೈವದ ಪ್ರತಿಷ್ಠಾಪನೆ ಮತ್ತು ವಾರ್ಷಿಕ ಕೋಲೋತ್ಸವ ತಾ. 12 ರಿಂದ 14ರವರೆಗೆ ನಡೆಯಲಿದೆ. ತಾ. 12 ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರತಿಷ್ಟಾಂಗ ಹೋಮ, 9ಕ್ಕೆ ಪಂಜುರ್ಲಿ ದೈವದ ಪ್ರತಿಷ್ಠಾಪನೆ ಬಳಿಕ ವಿವಿಧ ಧಾರ್ಮಿಕ ಕಾರ್ಯ ನಡೆದು ರಾತ್ರಿ 8ಕ್ಕೆ ಪಂಜುರ್ಲಿ, ಕಲ್ಕುಡ ಕಲ್ಲುರ್ಟಿ, ದೈವರಾಜ ಗುಳಿಗ ಕೋಲೋತ್ಸವ, ತಾ. 13 ರಂದು ಬೆಳಿಗ್ಗೆ 7 ಗಂಟೆಯಿಂದ ಕೊರಗಜ್ಜ ಕೋಲ, ತಾ. 14 ರಂದು ವಿವಿಧ ಪೂಜೆ ನಡೆದು 12.30ಕ್ಕೆ ಅಗೇಲು ಸೇವೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.