ಚೆಯ್ಯಂಡಾಣೆ, ಏ. 8: ಇತಿಹಾಸ ಪ್ರಸಿದ್ಧ ಕೊಂಡಂಗೇರಿ ಮಖಾಂ ಉರೂಸ್ ಸಮಾರಂಭ ತಾ. 10 ರಿಂದ 14ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕೊಂಡಂಗೇರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಪೇರಿಯಂಡ. ಎ.ಯೂಸುಫ್ ಹಾಜಿ ತಿಳಿಸಿದ್ದಾರೆ. ಕೊಂಡಂಗೇರಿ ಜಮಾಅತ್ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂಸುಫ್ ಹಾಜಿ ಕೊಂಡಂಗೇರಿ ದರ್ಗಾ ಷರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಸ್ಸಯ್ಯದ್ ಅಬ್ದುಲ್ಲಾಹಿ ಸಖಾಫ್ ಅಲ್ ಹಳ್ರಮಿ (ನ.ಮ)ಹಾಗೂ ಸಮೀಪದ ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಪವಾಡ ಪುರುಷರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸುವ ಉರೂಸ್ ಸಮಾರಂಭ ಈ ವರ್ಷ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.ಉರೂಸ್ ಸಮಾರಂಭ ಕಾರ್ಯಕ್ರಮದಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದು ಜಾತಿ, ಧರ್ಮ, ಭೇದ ಮರೆತು ಸರ್ವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಜಮಾಅತ್ ಕಾರ್ಯದರ್ಶಿ ಪುದಿಯಪೆರೆ ಮುಜೀಬ್ ಮಾತನಾಡಿ ತಾ.10 ರಂದು ಜುಮಾ ನಮಾಜಿನ ಬಳಿಕ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ ದ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಸಯ್ಯದ್.ಎಸ್.ಹಕೀಂ ಅಸ್ಸಖಾಫ್ ಆದೂರ್ ತಂಙಳ್ ಮಖಾಂ ಅಲಂಕಾರ, ಖತಂ ದುಆ ಹಾಗೂ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದು 1ನೇ ತಕ್ಕ ಮುಖ್ಯಸ್ಥ ಪೇರಿಯಂಡ ಕುಂಞ ಅಹ್ಮದ್ ಮುಸ್ಲಿಯಾರ್,2ನೇ ತಕ್ಕ ಮುಖ್ಯಸ್ಥ ಪುದಿಯಪುರ ಅಬ್ದುಲ್ ಅಝಿಝ್ ಹಾಜಿ,3ನೇ ತಕ್ಕ ಮುಖ್ಯಸ್ಥ ಎಂ.ಐ.ಇಕ್ಬಾಲ್ ಹಾಜಿ 4ನೇ ತಕ್ಕ ಮುಖ್ಯಸ್ಥ ಕೊಟ್ಟೆಯಾಡ್ ಶಾದುಲಿ ಉಪಸ್ಥಿತರಿರುವರು. ಅಂದು ರಾತ್ರಿ ಅಸಯ್ಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್ ನಡೆಯಲಿದ್ದು ಪ್ರಖ್ಯಾತ ವಾಗ್ಮಿ ಪೇರೋಡ್ ಅಬ್ದುಲ್ ರಹ್ಮನ್ ಸಖಾಫಿ ಮತ ಪ್ರವಚನ ನಡೆಸಲಿದ್ದಾರೆ.
ತಾ.11 ರಂದು ರಾತ್ರಿ ಮೊಹಮ್ಮದ್ ರಾಫಿ ಹಿಮಾಮಿ ಸಖಾಫಿ ದೇರಳಕಟ್ಟೆ ಮತ ಪ್ರವಚನಕ್ಕೆ ನೇತೃತ್ವ ವಹಿಸಲಿದ್ದಾರೆ. ತಾ.12 ರಂದು ನೌಫಲ್ ಸಖಾಫಿ ಕಳಸ ಧಾರ್ಮಿಕ ಮತ ಪ್ರವಚನ ನಡೆಸಲಿದ್ದಾರೆ ಎಂದು ಹೇಳಿದರು. ತಾ.13ರಂದು ಮದ್ಯಾಹ್ನ 1 ಗಂಟೆಗೆ ಜಮಾಅತ್ ಅಧ್ಯಕ್ಷ ಪೇರಿಯಂಡ ಯೂಸುಫ್ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮ್ಮೇಳನ ನಡೆಯಲಿದ್ದು ಸಯ್ಯಿದ್ ಶಿಯಾಬುದ್ದಿನ್ ಅಲ್ ಐದರೂಸಿ ಕಿಲ್ಲೂರ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ವಖ್ಫ್ ಕೌನ್ಸಿಲ್ ಉಪಾಧ್ಯಕ್ಷ ಶಾಫಿ ಸಅದಿ ಮುಖ್ಯ ಭಾಷಣ ಮಾಡಲಿದ್ದಾರೆ.ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೆÇನ್ನಣ್ಣ, ಮಡಿಕೇರಿ ಶಾಸಕರಾದ ಡಾ.ಮಂತÀರ್ ಗೌಡ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಸೇರಿದಂತೆ ವಿವಿಧ ಧಾರ್ಮಿಕ ಸಾಮಾಜಿಕ ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ.ಸಂಜೆ 4 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ ವಾಗ್ಮಿ ಡಾ.ಫಾರೂಕ್ ನಈಮಿ ಕೊಲ್ಲಂ ಧಾರ್ಮಿಕ ಮತಪ್ರವಚನ ನಡೆಸಲಿದ್ದಾರೆ ಎಂದು ತಿಳಿಸಿದರು.
ತಾ.14 ರಂದು ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು ವಾಗ್ಮಿ ಪೇರೋಡ್ ಮೊಹಮ್ಮದ್ ಅಝರಿ ಮುಖ್ಯ ಪ್ರಭಾಷಣ ನಡೆಸಲಿದ್ದು, ಸಯ್ಯಿದ್ ಕೆಎಸ್ ಅಟಕೋಯಾ ತಂಙಳ್ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮಾರ, ರಾಜ್ಯಕೀಯ ನೇತಾರರು ಸೇರಿದಂತೆ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮುಜೀಬ್ ತಿಳಿಸಿದರು.
ಸುದ್ದಿಗೊಷ್ಟಿಯಲ್ಲಿ ಕೊಂಡಂಗೇರಿ ಜಮಾಅತ್ ಕೋಶಾಧಿಕಾರಿ ಅಬ್ದುಲ್ ಕರೀಂ ಹಾಜಿ, ಹೆಚ್ಚುವರಿ ಕಾರ್ಯದರ್ಶಿ ಜೆ.ಎಸ್. ಮೊಹಮ್ಮದ್ ಹನೀಫ್, ಆಡಳಿತ ಮಂಡಳಿ ಸದಸ್ಯರಾದ ಟಿ.ಎಂ. ಅಬ್ದುಲ್ ಖಾದರ್ ಉಪಸ್ಥಿತರಿದ್ದರು.