ಮಡಿಕೇರಿ, ಏ. 8: ಗಾಂಜಾ ಮಾರಾಟಕ್ಕೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ವೀರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರ್ಜಿ ಗ್ರಾಮದ ಹೆಗ್ಗಳ ಜಂಕ್ಷನ್‍ನಲ್ಲಿ ತಾ. 7 ರಂದು ಗಾಂಜಾ ಮಾರಾಟ, ಸರಬರಾಜು ಕುರಿತು ದೊರೆದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೈಸೂರಿನ ಶಾಂತಿನಗರದ ಹರ್ಷದ್ ಖಾನ್ (25), ಮೈಸೂರಿನ ಅಜಿತ್ ಸೇಟ್ ನಗರದ ಬಿ.ಡಿ. ಕಾಲೋನಿ ನಿವಾಸಿ ಮುಜಾಮಿಲ್ ಅಹಮ್ಮದ್ (46), ಅಪ್ಸಲ್ ಪಾಷ (28), ಮೈಸೂರು ಕಲ್ಯಾಣಗಿರಿ ನಿವಾಸಿ ಸಾಕ್ಯೂಬ್ (32) ಬಂಧಿತ ಆರೋಪಿಗಳು. ಇವರುಗಳಿಂದ 576 ಗ್ರಾಂ ಗಾಂಜಾ ಹಾಗೂ ಟೊಯೋಟಾ ಇಟಿಯೋಸ್ ಕಾರ್ (ಕೆಎ-09-ಸಿ-2898) ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್‍ಪಿ ಮಹೇಶ್ ಕುಮಾರ್ ನೇತೃತ್ವದ ತಂಡದಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಪಿಎಸ್‍ಐ ಪ್ರಮೋದ್, ಟಿ.ಪಿ. ಮಂಜುನಾಥ್, ಹೇಮಂತ್ ಕುಮಾರ್, ತೇಜಸ್ ಕುಮಾರ್, ಹರೀಶ್ ಎನ್.ಆರ್., ಸಾಗರ್ ಎನ್.ಎನ್., ಕುಮಾರ್ ಜಿ,, ಮುದಿಯಜ್ಜಳ ಭೀಮಾಜ್ಜ ಇದ್ದರು.
ಗಾಂಜಾ ಬಳಕೆ, ಮಾರಾಟ ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ 112 ತುರ್ತು ಸಹಾಯವಾಣಿ ಸಂಪರ್ಕಿಸುಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಕೋರಿದ್ದಾರೆ.