ಶನಿವಾರಸಂತೆ, ಏ. 8 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಸಾಪ ಶನಿವಾರಸಂತೆ ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಶನಿವಾರಸಂತೆಯ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ 2025-26 ನೇ ಸಾಲಿನ ದಿ. ಬಿ.ಜಿ.ರಘುನಾಥ್ ನಾಯಕ್ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ.ವಿಜೇತ್ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕ ನುಡಿಯಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಹಣ ಶಾಶ್ವತವಾಗಿರುತ್ತದೆ.ಕಾರ್ಯಕ್ರಮ ಹಮ್ಮಿಕೊಂಡು ದತ್ತಿ ದಾನಿಗಳ ಹೆಸರಿನಲ್ಲಿ ಉಪನ್ಯಾಸದ ಮೂಲಕ ಸ್ಮರಣೆ ನಡೆಯುತ್ತಿದೆ ಎಂದರು ತಾಲೂಕು ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷ ಜೆ.ಸಿ.ಶೇಖರ್ ದತ್ತಿ ಉಪನ್ಯಾಸ ನೀಡಿ, ರಘುನಾಥ್ ನಾಯಕ್ ಜನಪ್ರಿಯ ವಕೀಲರಾಗಿದ್ದರು. ವಿಚಾರವಂತರು, ಜನಸ್ನೇಹಿಯಾಗಿದ್ದು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಿ ನಡೆಯಬೇಕೆಂಬ ಹಂಬಲ ಅವರಿಗಿತ್ತು.ದತ್ತಿ ಕಾರ್ಯಕ್ರಮ ಆಚರಣೆಯμÉ್ಟೀ ಕುಟುಂಬದವರ ಉಪಸ್ಥಿತಿಯೂ ಮುಖ್ಯ ಎಂದರು. ಕಸಾಪ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಸಾಹಿತಿ ಶ.ಗ.ನಯನತಾರಾ, ದತ್ತಿ ದಾನಿ ಲಲಿತಾ, ಸಾಹಿತಿ ಲಾವಣ್ಯಾ ಮೋಹನ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಎ.ಪಿ. ವೀರರಾಜ್, ಜ್ಯೋತಿ ಅರುಣ್, ಹೋಬಳಿ ಘಟಕದ ಕಾರ್ಯದರ್ಶಿ ಎಂ.ಪಿ.ಮೋಹನ್, ನಿರ್ದೇಶಕರಾದ ಸಿ.ಪ್ರಕಾಶ್ಚಂದ್ರ, ಎಸ್.ಆರ್.ಶಿವಣ್ಣ ಹಾಗೂ ರಾಮು ಉಪಸ್ಥಿತರಿದ್ದರು.ಉಪನ್ಯಾಸಕಿ ಜ್ಯೋತಿ ಅರುಣ್ ಕಾರ್ಯಕ್ರಮ ನಿರ್ವಹಿಸಿದರು.