ಸೋಮವಾರಪೇಟೆ, ಏ. 8: ‘ನಾವು’ ಪ್ರತಿಷ್ಠಾನ ಸಂಸ್ಥೆ ಕೊಡಗು ಮತ್ತು ಗುಡ್ ಮೈಂಡ್ಸ್ ಸಹಯೋಗದಲ್ಲಿ ತಾ.10 ರಿಂದ 25ರವರೆಗೆ ಮಹಿಳಾ ಸಹಕಾರ ಸಮಾಜ ಆವರಣದಲ್ಲಿ ‘ಮಕ್ಕಳ ಬಾಲ್ಯ ಕಟ್ಟುವ ಹಬ್ಬ’ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಸಂಸ್ಥೆಯ ಸಂಸ್ಥಾಪಕ ಗೌತಮ್ ಕಿರಗಂದೂರು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಈ ಶಿಬಿರವು ಮಕ್ಕಳ ಸಮಗ್ರ ಅಭಿವೃದ್ಧಿಗೆ ಅನುಭವಾತ್ಮಕ ಕಲಿಕೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಇಂದಿನ ಏಐ ಮತ್ತು ಗ್ಯಾಜೆಟ್‍ಗಳ ಯುಗದಲ್ಲಿ ಮಕ್ಕಳು ನಿಸರ್ಗದಿಂದ ದೂರವಾಗುತ್ತಿರುವ ಹಿನ್ನೆಲೆಯಲ್ಲಿ, ಅವರ ಬಾಲ್ಯವನ್ನು ಸುಂದರ ಹಾಗೂ ಸುರಕ್ಷಿತವಾಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಬಿರದಲ್ಲಿ ಜೀವನ ಕೌಶಲ್ಯಗಳು, ಹಳೆಯ ಆಟಗಳ ಪರಿಚಯ, ಕ್ಷೇತ್ರ ಭೇಟಿ, ಸೃಜನಶೀಲ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಶಿಬಿರವು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಯಲಿದ್ದು, 6 ರಿಂದ 16 ವರ್ಷದ ಮಕ್ಕಳಿಗೆ ಪ್ರವೇಶವಿದೆ. ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ಸುಮನ ಅವರು ಶಿಬಿರಾರ್ಥಿಗಳಿಗೆ ಜೀವನ ಕೌಶಲ್ಯಗಳ ಮತ್ತು ಹಳೆಯ ಆಟಗಳ ಬಗ್ಗೆ ತಿಳಿಸಿಕೊಡಲಿದ್ದಾರೆ.

ವಿವಿಧ ಕ್ಷೇತ್ರಗಳ 15 ಕ್ಕೂ ಹೆಚ್ಚು ಅನುಭವಿ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880050881 ಮತ್ತು 9164131636 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.