ಹೆಚ್.ಕೆ.ಜಗದೀಶ್

ಗೋಣಿಕೊಪ್ಪಲು, ಏ. 7: ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಬಳಿಯ ಅಥ್ಲಾನ್ ಟರ್ಫ್ ಮೈದಾನದಲ್ಲಿ ದೇವಣಗೇರಿ ಮುಕ್ಕಾಟಿರ ಕುಟುಂಬದ ವತಿಯಿಂದ ಆಯೋಜಿಸಲಾಗಿರುವ 6 ನೇ ವರ್ಷದ ಕೊಡವ ಕೌಟುಂಬಿಕ ಹೊನಲು ಬೆಳಕಿನ 5 ಎ ಸೈಡ್ ಫುಟ್ಬಾಲ್ ಪಂದ್ಯಾವಳಿಗೆ ಅದ್ದೂರಿ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಡಗು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ದೀಪ ಬೆಳಗಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕ್ರೀಡಾ ಜಿಲ್ಲೆ ಎನಿಸಿಕೊಂಡಿರುವ ಕೊಡಗು ಪ್ರತಿ ವರ್ಷ ಯಾವುದಾದರೂ ಒಂದು ಕ್ರೀಡೆಯಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಕೊಡವ ಕುಟುಂಬಗಳ ನಡುವೆ ನಡೆಯುತ್ತಿದ್ದ ಹಾಕಿ, ಕ್ರಿಕೆಟ್ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಹಗ್ಗ ಜಗ್ಗಾಟ, ಫುಟ್ ಬಾಲ್ ಕ್ರೀಡೆಗಳು ನಡೆಯುತ್ತಿದ್ದು ಕೊಡವ ಕುಟುಂಬಗಳನ್ನು ಒಂದುಗೂಡಿಸುವ ಕಾರ್ಯ ಮಾಡುತ್ತಿವೆ. ಮಾನಸಿಕ ಸಂತೋಷ ಹಾಗೂ ದೈಹಿಕ ಅರೋಗ್ಯಕ್ಕೆ ಕ್ರೀಡೆ ಮುಖ್ಯವಾಗಿದ್ದು, ಕುಟುಂಬಗಳ ಒಗ್ಗಟ್ಟು ಪ್ರದರ್ಶನಕ್ಕೆ ಸಹಕಾರಿಯಾಗಿದೆ. ಕ್ರೀಡೆಯ ಜೊತೆಗೆ ಕೊಡಗಿನಲ್ಲಿ ಆಚಾರ ವಿಚಾರ, ಸಂಸ್ಕøತಿ ಉಳಿಸಬೇಕು. ಕೊಡವ ಭಾμÉಯನ್ನು ಮಾತಾಡುವ ಮೂಲಕ ಭಾμÉಯ ಬೆಳವಣಿಗೆ ಮಾಡಬೇಕು. ಭೂಲೋಕದ ಸ್ವರ್ಗದಂತಿರುವ ಕೊಡಗಿನ ಮಣ್ಣನ್ನು ಹೊರಗಿನವರಿಗೆ ಮಾರಾಟ ಮಾಡದೇ ಉಳಿಸಿಕೊಳ್ಳಬೇಕು. ಕೊಡಗಿನ ಸುಂದರ ಪರಿಸರ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ದೇವಣಗೇರಿ ಫುಟ್ಬಾಲ್ ನಮ್ಮೆ ಯಶಸ್ವಿಯಾಗಿ ನಡೆದು, ರಾಜ್ಯ, ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಹೊರ ಬರುವಂತಾಗಲಿ ಎಂದು ಹಾರೈಸಿದರು. 4ಐದನೇ ಪುಟಕ್ಕೆ

(ಮೊದಲ ಪುಟದಿಂದ) ಫುಟ್ಬಾಲ್ ನಮ್ಮೆ ಅಧ್ಯಕ್ಷ ಮುಕ್ಕಾಟೀರ ಕಿಶನ್ ಕರುಂಬಯ್ಯ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕೊಡಗಿನಲ್ಲಿ ಹಾಕಿ, ಕ್ರಿಕೆಟ್ ಆಟಕ್ಕೆ ದೊರಕುತ್ತಿರುವ ಪೆÇ್ರೀತ್ಸಾಹ ನೋಡಿ ಕಳೆದ 5 ವರ್ಷದ ಹಿಂದೆ ಫುಟ್ಬಾಲ್ ನಮ್ಮೆಯನ್ನು ಪ್ರಾರಂಭ ಮಾಡಲಾಯಿತು. ಈ ಬಾರಿ ದೇವಣಗೇರಿ ಮುಕ್ಕಾಟಿರ ಕುಟುಂಬ ಪಂದ್ಯಾವಳಿ ಆಯೋಜಿಸಿದ್ದು, ಕುಟುಂಬದ ಎಲ್ಲಾ ಸದಸ್ಯರು ಒಗ್ಗಟಿನಿಂದ ಪಂದ್ಯಾವಳಿಗೆ ಸಹಕಾರ ನೀಡಿದ್ದಾರೆ ಎಂದರು.

ಈ ಸಂದರ್ಭ ದೇವಣಗೇರಿ ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಸೋಮಯ್ಯ, ಹಿರಿಯರಾದ ಬೋಪಣ್ಣ ಇದ್ದರು.

ಮುಕ್ಕಾಟಿರ ಡಾ. ಕಾರ್ಯಪ್ಪ ಅತಿಥಿ ಪರಿಚಯ ಮಾಡಿದರು. ಮುಕ್ಕಾಟಿರ ಆನ್ಯ ನಂಜಪ್ಪ, ಅರ್ಜುನ್ ಚಂಗಪ್ಪ, ಎಂ.ಎಂ.ಬೋಪಯ್ಯ ತಂಡ ಪ್ರಾರ್ಥಿಸಿದರು. ಮುಕ್ಕಾಟಿರ ಡಾ. ಅಮೃತ್ ನಾಣಯ್ಯ ಸ್ವಾಗತಿಸಿ, ಮುಕ್ಕಾಟಿರ ಶಿಲ್ಪಾ ನಂಜಪ್ಪ ವಂದಿಸಿದರು. ಮೂಕಚಂಡ ಸರಿತಾ ಬೊಳ್ಳಮ್ಮ ಕಾರ್ಯಕ್ರಮ ನಿರೂಪಿಸಿದರು. ಅಜ್ಜೇಟಿರ ವಿಕ್ರಂ ಉತ್ತಪ್ಪ ವೀಕ್ಷಕ ವಿವರಣೆ ನೀಡಿದರು. ಆರು ದಿನಗಳ ಕಾಲ ನಡೆಯುವ ಪುಟ್ಬಾಲ್ ಪಂದ್ಯಾವಳಿಗೆ ಆರಂಭದ ದಿನವೇ ನಿರೀಕ್ಷೆ ಮೀರಿ ಕ್ರೀಡಾಭಿಮಾನಿಗಳು ಮೈದಾನದ ಸುತ್ತಲೂ ನೆರೆದಿದ್ದರು. ಹೊನಲು ಬೆಳಕಿನ ಪುಟ್ಬಾಲ್ ಪಂದ್ಯಾವಳಿಯಲ್ಲಿ ಹಲವು ತಂಡಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದವು. ಅಥ್ಲಾನ್ ಟರ್ಪ್ ಮೈದಾನದಲ್ಲಿ ಈ ಬಾರಿ ಎರಡನೇ ಕೊಡವ ಕೌಟುಂಬಿಕ ಫುಟ್ಬಾಲ್ ಆಯೋಜನೆಗೊಂಡಿದೆ. ಸುತ್ತಮುತ್ತಲಿನ ಗ್ರಾಮದ ಪುಟ್ಬಾಲ್ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕುಟುಂಬದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.