ಮಡಿಕೇರಿ, ಮೇ. 7: ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಚೇನಂಡ ಹಾಕಿ ನಮ್ಮೆಯ ಅಂಗವಾಗಿ ಕಾಫಿ ಹಾಗೂ ಜೇನು ಕೃಷಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಮುಖರು ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಅಜಿತ್ ಪೂಣಚ್ಚ, ಹಾಕಿ ನಮ್ಮೆ ಈಗಾಗಲೇ ಆರಂಭವಾಗಿದ್ದು, ಮೇ 2 ರ ತನಕ ನಡೆಯಲಿದೆ. ಇದರ ಪ್ರಯುಕ್ತ ತಾ. 12 ರಂದು ಮೈದಾನದಲ್ಲಿ ಕಾಫಿ ಕೃಷಿ ಸಂಬಂಧಿತ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಕಾಫಿ ಮಂಡಳಿಯಿಂದ ತಜ್ಞರು ಆಗಮಿಸಿ ತರಬೇತಿ ನೀಡಲಿದ್ದಾರೆ. ಮಣ್ಣಿನ ಪರೀಕ್ಷೆ, ಕಾಫಿ ಕೃಷಿ ಸಂಬಂಧಿತ ಉಪಯುಕ್ತ ಮಾಹಿತಿ, ರೋಗಗಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಲಿದ್ದಾರೆ. ಕೊಡಗು ಜಿಲ್ಲೆಯ ಜೇನಿಗೆ ಅಪಾರ ಬೇಡಿಕೆಯಿದ್ದು, ಕುಂದುತ್ತಿರುವ ಜೇನು ಕೃಷಿಯನ್ನು ಪುನಶ್ಚೇತಗೊಳಿಸುವ ದೃಷ್ಟಿಯಲ್ಲಿ ಜೇನು ಕೃಷಿಯ ತರಬೇತಿ ಕಾರ್ಯಕ್ರಮ ತಾ. 19 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆಂಚಾರೆಡ್ಡಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಸೋತ ತಂಡಗಳಿಗೆ ಜೇನುಪೆಟ್ಟಿಗೆಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುತ್ತಿದೆ. ಇದರಿಂದ ಜೇನುಕೃಷಿಯ ಬಗ್ಗೆ ಆಸಕ್ತಿ ಮೂಡಲು ಸಾಧ್ಯವಾಗಬಹುದು ಎಂದರು.
ಹಾಕಿ ಉತ್ಸವ ಸಮಿತಿ ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ ಮಾತನಾಡಿ, ಏ. 10 ರಂದು ನಾಪೋಕ್ಲು ಕೊಡವ ಸಮಾಜದ ಸಹಯೋಗದೊಂದಿಗೆ ಕೊಡವ ಸಾಂಸ್ಕøತಿಕ ಕಲಿಕಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಬೊಳಕಾಟ್, ಬಾಳೋಪಾಟ್, ಉಮ್ಮತಾಟ್ನಂತಹ ಸಾಂಸ್ಕøತಿಕ ಪ್ರಾಕಾರಗಳನ್ನು ಕಲಿಸಿಕೊಡಲಾಗುವುದು. ಇದರೊಂದಿಗೆ ಕೊಡವ ಕುಟುಂಬಗಳ ನಡುವೆ 4*100 ರಿಲೇ, ಮ್ಯಾರಥಾನ್, ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಕ್ತಾರ ಸುರೇಶ್ ನಾಣಯ್ಯ ಮಾತನಾಡಿ, ಹಾಕಿ ನಮ್ಮೆ ಅಂಗವಾಗಿ ಜನವರಿ ತಿಂಗಳಿನಲ್ಲಿ ಜಿಲ್ಲೆಯ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಹಾಕಿ ಪಂದ್ಯಾವಳಿಯಲ್ಲಿ 33 ತಂಡಗಳು ಭಾಗವಹಿಸಿದ್ದವು. 4ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇದರಲ್ಲಿ 30 ಆಟಗಾರರನ್ನು ತರಬೇತಿಗೆ ಆಯ್ಕೆ ಮಾಡಿದ್ದು, ಅವರಿಗೆ ನಿತ್ಯ ಸೂಕ್ತ ತರಬೇತಿಯನ್ನು ಪರಿಣಿತರು ನೀಡುತ್ತಿದ್ದಾರೆ. ಈ ಪೈಕಿ 12 ಅತ್ಯುತ್ತಮ ಆಟಗಾರರನ್ನು ಗುರುತಿಸಿ ಅವರನ್ನು ಕ್ರೀಡಾ ವಸತಿ ಶಾಲೆಗಳಿಗೆ ಸೇರ್ಪಡೆ ಮಾಡಲು ಶ್ರಮಿಸಲಾಗುತ್ತಿದೆ ಎಂದ ಅವರು, ಈಗಾಗಲೇ 2800 ಗಿಡಗಳನ್ನು ನೆಡಲಾಗಿದೆ. ಗೋಲಿಗೊಂದು ಗಿಡ ನೆಡುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಲಕ್ಷ್ಮಣತೀರ್ಥ ನದಿ ಅಂಚಿನಲ್ಲಿ 500 ಗಿಡ ನೆಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಜಪ್ಪು ದೇವಯ್ಯ, ಗಿರೀಶ್ ಪೂಣಚ್ಚ ಹಾಜರಿದ್ದರು.