ಮಡಿಕೇರಿ, ಏ. 5: ಪರಿಸರ ಕಾಳಜಿ ಧ್ಯೇಯದೊಂದಿಗೆ ಕೊಡಗಿನಿಂದ ನೇಪಾಳದವರೆಗೆ ಅಂತರರಾಷ್ಟ್ರೀಯ ಬೈಕ್ ಪ್ರವಾಸವನ್ನು ಮಡಿಕೇರಿಯ ‘ಕೂರ್ಗ್ ಬೈಕ್ ಜೋನ್ ಗೆಳೆಯ ಬಳಗ’ದ ವತಿಯಿಂದ ಹಮ್ಮಿಕೊಳ್ಳಲಾಗಿದೆ.

3 ಬೈಕ್‍ಗಳಲ್ಲಿ ವಿನಯ್ ದೇರಜೆ, ಅಭಿμÉೀಕ್ ಹಾಗೂ ಗೌತಮ್ ಗೌಡ ಅವರುಗಳು ಪ್ರಯಾಣ ನೇಪಾಳಕ್ಕೆ ಬೆಳೆಸಿದರು. ನೇಪಾಳ ತಲುಪುವವರೆಗೂ ದಾರಿಯುದ್ದಕ್ಕೂ ಒಟ್ಟು 1,000 ಬೀಜಗಳನ್ನು ನೆಡುವ ವಿಶೇಷ ಪರಿಸರ ಪ್ರೇಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿನಯ್ ಅವರು ಈ ಸಂದರ್ಭ ಮಾಹಿತಿ ನೀಡಿದರು.

ಮಡಿಕೇರಿಯ ಗಣಪತಿ ಬೀದಿಯ ಬೈಕ್ ಜೋನ್‍ನ ಮುಂಭಾಗ ಈ ಕಾರ್ಯಕ್ರಮಕ್ಕೆ ಕೊಡಗು ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ರವಿ ಗೌಡ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಅನಂತ್ ಗೌಡ, ಪುನೀತ್, ಮಿಲನ್, ಪುವಿತ್, ಪ್ರಪುಲ್, ಅಭಿμÉೀಕ್, ತೇಜ, ಪವನ್, ದಿಲನ್ ಪಾಲ್ಗೊಂಡಿದ್ದರು.