ವೀರಾಜಪೇಟೆ, ಏ. 5: ವೀರಾಜಪೇಟೆ ಕೊಡವ ಸಮಾಜದ ಕೊಡವ ಪೆÇಮ್ಮಕ್ಕಡ ಒಕ್ಕೂಟದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು. ಕಲಾವಿದರು, ಸಾಹಿತಿಗಳಾದ ಮೊಣ್ಣಂಡ ಶೋಭಾ ಸುಬ್ಬಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣು ಯಾವ ಲಾಭಕ್ಕೂ ಆಕೆ ಆಸೆಪಡದೇ ತನ್ನ ಜೀವನವನ್ನು ಸಂಸಾರಕ್ಕಾಗಿ ಮುಡಿಪಾಗಿಡುತ್ತಾಳೆ. ಹೆಣ್ಣು ಅಬಲೆಯಲ್ಲ ಆಕೆ ಸಬಲೆ ಎಂದ ಅವರು, ಹೆಣ್ಣಿನ ಕುರಿತು ಕವನವನ್ನು ವಾಚಿಸಿದರು.
ಕಾಣತಂಡ ಶೀಲ ದಿನದ ಮಹತ್ವದ ಕುರಿತು ಮಾತನಾಡಿದರು. ವೀರಾಜಪೇಟೆ ಕೊಡವ ಪೆÇಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಮನೆಯಿಂದ ಹೊರಬಂದು ತಮ್ಮ ಜ್ಞಾನವನ್ನು ಪ್ರದರ್ಶಿಸಬೇಕು ಎಂದರು. ಒಕ್ಕೂಟದ ಚುಮ್ಮಕ್ಕ ತಂಡದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಹಿಳೆಯರಿಗೆ ವಿವಿಧ ಮನೋರಂಜನಾ ಕ್ರೀಡೆಗಳನ್ನು ಹಾಗೂ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭ ಒಕ್ಕೂಟದ ಬ್ಯಾನರ್ ಹಾಗೂ ದೀಪವನ್ನು ಪೆÇನ್ನಕ್ಕ ತಂಡದವರಿಗೆ ಮುಂದಿನ ಕಾರ್ಯಕ್ರಮವನ್ನು ನಡೆಸಲು ಹಸ್ತಾಂತರಿಸಲಾಯಿತು. ಉದ್ದಪಂಡ ವಿಮಲ, ಮುರುವಂಡ ಉಷಾ ನೀಲಕಂಠ, ಕಂಬಿರಂಡ ರೇಷ್ಮಾ ಚಿಣ್ಣಪ್ಪ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಕೊಡವ ಪೆÇಮ್ಮಕ್ಕಡ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.