ಮಡಿಕೇರಿ, ಏ. 3: ಇಲ್ಲಿನ ಬಸವೇಶ್ವರ ದೇಗುಲದಲ್ಲಿ ಅಕ್ಕಮಹಾದೇವಿ ಜಯಂತಿ ಮತ್ತು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರ ಜನ್ಮದಿನಾಚರಣೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಇಲ್ಲಿನ ಮಹದೇವಪೇಟೆಯ ಅಕ್ಕನಬಳಗದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದರು.

ಅಕ್ಕಮಹಾದೇವಿ ಮತ್ತು ಶಿವಕುಮಾರಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ರುದ್ರಾಭಿμÉೀಕ, ವಿಶೇಷ ಅಲಂಕಾರ, ಪುμÁ್ಪರ್ಚನೆ, ಮಹಾನೈವೇದ್ಯ ಮತ್ತು ಮಹಾಮಂಗಳಾರತಿಗಳು ನೆರವೇರಿದವು. ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಬಸವೇಶ್ವರ ದೇಗುಲದ ಆಡಳಿತ ಮಂಡಳಿಯವರು ಹಾಗೂ ಅಕ್ಕನ ಬಳಗದ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಕ್ಕಮಹಾದೇವಿ ಮತ್ತು ಶಿವಕುಮಾರಸ್ವಾಮೀಜಿ ಅವರ ಕುರಿತು ವಿಶೇಷ ಉಪನ್ಯಾಸಗಳು ಜರುಗಿದವು.