ನಾಪೆÇೀಕ್ಲು, ಏ. 3: ಉತ್ತಮ ಭವಿಷ್ಯ ದೊರೆಯಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರು ವಿದ್ಯಾವಂತರಾಗಿ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಬನ್ಸಿರಾಜ್ ಕುಶಾಲಪ್ಪ ಕರೆ ನೀಡಿದರು.
ಇಲ್ಲಿಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿಲ್ಲಿ ಮಾತನಾಡಿದ ಅವರು, ಕೇವಲ ತಂತ್ರಜ್ಞಾನದಿಂದ ಎಲ್ಲವನ್ನು ಕಲಿಯಲು ಸಾಧ್ಯವಿಲ್ಲ. ಪುಸ್ತಕದಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಪುಸ್ತಕ ಓದುವ ಅಭ್ಯಾಸ ಮೈಗೂಡಿಸಿಕೊಳ್ಳುವಂತೆ ಹೇಳಿದರು.
ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೆಟೋಳಿರ ರತ್ನ ಚರ್ಮಣ ಮಾತನಾಡಿದರು.
ಶಾಲೆಯ ನಾಯಕ ಯೋಹನ್ ಮುತ್ತಣ್ಣ ಮಾತನಾಡಿ, ಶಾಲೆಯು ನಮಗೆ ಉತ್ತಮ ಶಿಕ್ಷಣವನ್ನು ನೀಡಿದೆ ಎಂದಿಗೂ ನಾವು ಶಾಲೆಯನ್ನು ಮರೆಯುವಂತಿಲ್ಲ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಶಾಲೆಯ ನಾಯಕಿ ಅನನ್ಯ ಅಯ್ಯಪ್ಪ ಮಾತನಾಡಿ, ಶಾಲೆಯು ಒಂದು ದೇವಸ್ಥಾನವಿದ್ದಂತೆ ಪ್ರತಿಯೊಬ್ಬರೂ ಕೂಡ ನಮ್ಮ ಜೀವನವನ್ನು ಇಲ್ಲಿಂದಲೇ ರೂಪಿಸಿಕೊಳ್ಳಬಹುದು. ಶಾಲೆಯ ಅನೇಕ ಒಳ್ಳೆಯ ಗುಣಗಳನ್ನು ಕಲಿಸಿಕೊಟ್ಟಿದೆ ಎಂದರು. ಗಾನ್ಯ ಸುಬ್ಬಯ್ಯ, ಮುಷಿದ, ಸೋಮಣ್ಣ, ಯೋಗರಾಜ್, ತಾನ್ಯಾ ತಂಗಮ್ಮ , ತೀರ್ಥ, ಸಿಂಚನ ಶಾಲೆಯ ಕುರಿತು ಅಭಿಪ್ರಾಯ ಹಂಚಿಕೊಂಡರು. ಶಾಲಾ ಅಧ್ಯಕ್ಷ ಕೆಟೋಳಿರ ರಾಜ ಚರ್ಮಣ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಿರ್ದೇಶಕ ಕರುಂಬಯ್ಯ, ವಿನಿ ಕರುಂಬಯ್ಯ ಉಪಸ್ಥಿತರಿದ್ದರು.