ವೀರಾಜಪೇಟೆ, ಏ. 3: ವೀರಾಜಪೇಟೆ ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ 20ನೇ ವರ್ಷದ ಕ್ರೀಡಾಕೂಟ ತಾ. 17 ರಿಂದ 19 ರವರಗೆ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ ಗಣೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 17 ರ ಬೆಳಿಗ್ಗೆ 10 ಗಂಟೆಗೆ ಕ್ರೀಡಾಕೂಟ ಉದ್ಘಾಟನೆಯಾಗಲಿದ್ದು, ತಾ. 18 ರಂದು ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ತಾ. 19 ರಂದು ಹಗ್ಗ ಜಗ್ಗಾಟ, ಥ್ರೋಬಾಲ್ ಸೇರಿದಂತೆ ಇನ್ನಿತರ ಕ್ರೀಡಾಕೂಟ ನಡೆಯಲಿದೆ. ಅಪರಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.

ಕ್ರೀಡಾಕೂಟವನ್ನು ವೀರಾಜಪೇಟೆ ಡಿ.ವೈಎಸ್‍ಪಿ ಮಹೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಲ್ಲವ ಸೇವಾ ಸಂಘದ ಕ್ರೀಡಾ ಕೂಟದ ಅಧ್ಯಕ್ಷ ಬಿ.ಜೆ ಅಶೋಕ, ನಿವೃತ್ತ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎನ್.ಕೆ. ಮೋಹನ್ ಕುಮಾರ್, ಉದ್ಯಮಿ ಬಿ.ಆರ್. ಬೋಜಪ್ಪ ಪೂಜಾರಿ, ಜಿಲ್ಲಾ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷ ಅಧ್ಯಕ್ಷ ರಘು ಆನಂದ, ವೀರಾಜಪೇಟೆ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳಾದ ಸುಬ್ಬಪ್ಪ ಪೂಜಾರಿ ಮತ್ತು ಬಿ.ಎಸ್ ಚಂದ್ರಶೇಖರ್ (ರಾಜ), ಪುರಸಭೆಯ ಮಾಜಿ ಸದಸ್ಯರುಗಳಾದ ಅನಿತ ಕುಮಾರ್ ಮತ್ತು ಬಿ.ಡಿ ಸುನಿತಾ, ಹಾಗೂ ನಿವೃತ್ತ ಚೆಸ್ಕಾಂ ನೌಕರ ಬಿ.ಎ ಗಣೇಶ್ ಉಪಸ್ಥಿತರಿರಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲುರು ಮಠದ ಶ್ರೀ ವಿಖ್ಯಾತ ನಂದಸ್ವಾಮಿ, ಸಂಸದ ಯದುವೀರ್ ಒಡೆಯರ್, ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ, ಉಡುಪಿ-ಚಿಕ್ಕಮಗಳೂರು ಸಂಸದÀ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ನಾರಾಯಣ ಗುರು ಯುವ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ನಿವೃತ್ತ ನ್ಯಾಯಾಧೀಶ ಬಿ.ಎಂ. ರಾಜು, ವೀರಾಜಪೇಟೆ ಪೊಲೀಸ್ ಉಪನಿರೀಕ್ಷಕಿ ವಾಣಿಶ್ರೀ, ಗೋವಾದ ಉದ್ಯಮಿ ಪ್ರಕಾಶ್ ರಾಮಯ್ಯ ಪೂಜಾರಿ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಸ್ ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜರ್ನಾಧನ, ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಬಿ.ಜೆ ಅಶೋಕ, ಸಂಘದ ಖಜಾಂಚಿ ಬಿ.ಎಂ. ಸತೀಶ್ ಪೂಜಾರಿ, ಸದಸ್ಯ ಬಿ.ಎಂ ಕಿಶೋರ್ ಉಪಸ್ಥಿತರಿದ್ದರು.