ಸೋಮವಾರಪೇಟೆ, ಏ. 3: ಪಟ್ಟಣದ ಸಿ.ಎಸ್.ಐ ಸಂತ ಜಾನ್ ದೇವಾಲಯ ಹಾಗೂ ಕೊಡಗು ಪ್ರಾದೇಶಿಕ ಪರಿಷತ್ ವತಿಯಿಂದ ಉಪವಾಸ ಪ್ರಾರ್ಥನಾ ಕೂಟ ನಡೆಯಿತು.

ಸಿ.ಎಸ್.ಐ ದಕ್ಷಿಣ ಸಭಾ ಪ್ರಾಂತದ ಧರ್ಮಾಧ್ಯಕ್ಷ ಹೇಮಚಂದ್ರ ಕುಮಾರ್ ಬಿಶಪ್ ಉಪಸ್ಥಿತಿಯಲ್ಲಿ ಅಧ್ಯಾತ್ಮಿಕ ಗೀತೆಗಳೊಂದಿಗೆ ಪ್ರಾರ್ಥನಾ ಕೂಟವನ್ನು ಮುನ್ನಡೆಸಿದರು. ಸಂದೇಶಕರಾಗಿ ಆಗಮಿಸಿದ್ದ ಜಾನ್ ಕೆನಡಿ ಅವರು ದೇವರ ಸಂದೇಶವನ್ನು ನೀಡಿ ಭಕ್ತರಲ್ಲಿ ಅಧ್ಯಾತ್ಮಿಕ ಚೈತನ್ಯ ಮೂಡಿಸಿದರು.

ಕಾರ್ಯಕ್ರಮ ದಲ್ಲಿ ಕೊಡಗು ಪ್ರಾದೇಶಿಕ ಪರಿಷತ್ತಿನ ಅಧ್ಯಕ್ಷ ಜೈಸನ್ ಗೌಡರ್, ಉಪಾಧ್ಯಕ್ಷ ದಿಲಾನ್ ಚಕ್ರವರ್ತಿ, ಸಭಾಪಾಲಕರಾದ ಸ್ಯಾಮುವೆಲ್ ಮನೋಜ್ ಕುಮಾರ್, ಸಭಾಸೇವಕರಾದ ಪ್ರಿಯದರ್ಶಿನಿ, ಧರ್ಮಾಧ್ಯಕ್ಷರಾದ ಜೋಸೆಫ್ ಜಾನ್ಸನ್ ಹಾಗೂ ಶಶಿಕುಮಾರ್ ಸೇರಿದಂತೆ ಡಯಾಸಿಸ್ ಕಾರ್ಯದರ್ಶಿಗಳು ಮತ್ತು ಪರಿಷತ್ ಪದಾಧಿಕಾರಿಗಳು ಭಾಗವಹಿಸಿದ್ದರು.

ಇದೇ ವೇಳೆ ಸಿ.ಎಸ್.ಐ ಸಂತ ಜಾನ್ ದೇವಾಲಯದ ಸಭಾ ಪಾಲನಾ ಸಮಿತಿಯ ಸದಸ್ಯರಾದ ಡೇವಿಡ್, ಆಶಾ ಸೋಲಮನ್, ಪುಷ್ಪ ಜಾಯ್ ಹಾಗೂ ದಿವ್ಯ ಸುನಿಲ್ ಇದ್ದರು.