ಗೋಣಿಕೊಪ್ಪಲು, ಏ. ೨: ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕೆಬೀಡು ಗ್ರಾಮದ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಮಾಯಮುಡಿ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಮಡಿಕೆಬೀಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಿತಿಮತಿ ಬ್ಲೂ ಬಾಯ್ಸ್ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ರನ್ನರ್ ಅಪ್ ಪ್ರಶಸ್ತಿಯನ್ನು ಗೋಣಿಕೊಪ್ಪಲುವಿನ ಪ್ರೋಟೆಕ್ ಕ್ರಿಕೆಟರ್ಸ್ ಪಡೆದರೆ, ತೃತೀಯ ಸ್ಥಾನವನ್ನು ಕಾನೂರಿನ ಅದ್ದುಗೋಡು ಸಿಎಸ್ಸಿ ಪಡೆಯಿತು. ೪ನೇ ಸ್ಥಾನವನ್ನು ಪಡೆಯುವಲ್ಲಿ ಬಾಳೆಲೆಯ ಗಂಗಾ ಕ್ರಿಕೆಟರ್ಸ್ ಪಡೆಯಿತು.
ತಿತಿಮತಿ ಬ್ಲೂ ಬಾಯ್ಸ್ ತಂಡ ನಿಗದಿತ ಓವರ್ನಲ್ಲಿ ೬೪ ರನ್ಗಳಿಸಿ, ಎದುರಾಳಿ ಗೋಣಿಕೊಪ್ಪಲುವಿನ ಪ್ರೋಟೆಕ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ರನ್ ಕಲೆ ಹಾಕುವಲ್ಲಿ ವಿಫಲವಾದ ಪ್ರೋಟೆಕ್ ಕ್ರಿಕೆಟರ್ಸ್ ಸೋಲನ್ನು ಒಪ್ಪಿಕೊಂಡಿತು.
ಶ್ರೀ ಬಸವೇಶ್ವರ ಯುವಕ ಸಂಘದ ಅಧ್ಯಕ್ಷರಾದ ಕೆ.ಆರ್. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಅಂತಿಮ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಹೆಚ್ಚಾಗಿ ನಡೆಯುವುದರಿಂದ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಗಳು ನಿರ್ಮಾಣವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆಪಟ್ಟಿರ ಟಾಟೂ ಮೊಣ್ಣಪ್ಪ ಮಾತನಾಡಿದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಟ್ರೋಫಿ ದಾನಿಗಳಾದ ಕೆ.ಜಲೇಂದ್ರ ಸಣ್ಣಪ್ಪ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಬಾನಂಡ ಪ್ರಥ್ವಿ, ಕಾಫಿ ಬೆಳೆಗಾರರಾದ ಚೆಪ್ಪುಡಿರ ರಾಧ ಅಚ್ಚಯ್ಯ, ಗ್ರಾ.ಪಂ. ಮಾಜಿ ಸದಸ್ಯ ಸಿ.ಕೆ. ಪ್ರದೀಪ್, ಕಾಂಗ್ರೆಸ್ ಮುಖಂಡರಾದ ತೀತಮಾಡ ಯಶ್ವಿನ್, ಅಂತರರಾಷ್ಟಿçÃಯ ಕ್ರಿಕೆಟ್ ಆಟಗಾರ ವಿಧ್ವತ್ ಕಾವೇರಪ್ಪ, ಕಾಫಿ ಬೆಳೆಗಾರರಾದ ಮಲ್ಲೆಂಗಡ ಮಮತ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ರೆಹಮಾನ್ ಬಾಪು, ಚೇರಂಬಾಣೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ರಮೇಶ್, ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘದ ಅಧ್ಯಕ್ಷ ಕುಶಾಲಪ್ಪ ಮೂಲ್ಯ, ಉದ್ಯಮಿ ಕೆ.ಡಿ.ಅಪ್ಪಾಜಿ ಕೋಣನಕಟ್ಟೆ ಗ್ರಾಮದ ಹಿರಿಯ ಕಾಫಿ ಬೆಳೆಗಾರ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಶ್ರೀ ಬಸವೇಶ್ವರ ಯುವಕ ಸಂಘದ ಮಾಜಿ ಅಧ್ಯಕ್ಷ ಶಾಂತಕುಮಾರ್ ಬಾಳಾಜಿ ಗ್ರಾಮದ ಕಾಫಿ ಬೆಳೆಗಾರರಾದ ಕೆ.ಸಿ ಸುಧೀರ್, ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಎ.ಬೋಪಣ್ಣ, ಗೋಣಿಕೊಪ್ಪ ರೀಫಾಮರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಚೆಪ್ಪುಡೀರ ಎಸ್.ಗಣಪತಿ, ಗ್ರಾ.ಪಂ. ಮಾಜಿ ಸದಸ್ಯರಾದ ಸಿ.ಕೆ. ಪ್ರದೀಪ್, ಹಾಗೂ ಮಾಯಮುಡಿ ಗ್ರಾಮದ ಕಾಫಿ ಬೆಳೆಗಾರರಾದ ಮಾಚಿಮಾಡ ದೇವಾನಂದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸತ್ಯ, ಕಾರ್ಯದರ್ಶಿ ಸತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗದಿಂದ ೧೬ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.