ಮಡಿಕೇರಿ, ಏ.೨: ಭಾರತದ ಸಂಸತ್ತು ಮತ್ತು ಕರ್ನಾಟಕ ವಿಧಾನ ಸಭೆ ಎರಡರಲ್ಲೂ ಕೊಡವ ಸಮುದಾಯಕ್ಕಾಗಿ ಪ್ರತ್ಯೇಕ ಕ್ಷೇತ್ರಗಳನ್ನು ನೀಡುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ವತಿಯಿಂದ ಒತ್ತಾಯಿಸಲಾಯಿತು.

ಜಿಲ್ಲಾಡಳಿತದಲ್ಲಿ ಇಂದು ಈ ಸಂಬAಧ ನಡೆದ ಸತ್ಯಾಗ್ರಹದಲ್ಲಿ ಮಾತನಾಡಿದ ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಅವರು, ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ಇರುವ ‘ಸಂಘ’ ಕ್ಷೇತ್ರದ ಮಾದರಿಯಲ್ಲೇ ಪ್ರತ್ಯೇಕ ಕ್ಷೇತ್ರ ಕೊಡವರಿಗೂ ನೀಡಬೇಕು. ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ಮಸೂದೆಯನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡಿಸಲಾಗುವುದು. ಮಾರ್ಚ್ ೨೦೨೬ರ ವರದಿಯ ಪ್ರಕಾರ, ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಈಗಿರುವ ೫೪೩ ರಿಂದ ೮೧೬ ಕ್ಕೆ ಏರಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲು ಸಕ್ರಿಯವಾಗಿ ಸಿದ್ಧತೆ ನಡೆಸುತ್ತಿದೆ. ಕೊಡವರು ಸಂಖ್ಯಾತ್ಮಕವಾಗಿ ಅತಿ ಕಡಿಮೆ ಇರುವ ಸಮುದಾಯವಾಗಿದ್ದು, ಭಾರತದ ಪ್ರಜಾಪ್ರಭುತ್ವ ರಚನೆಯಲ್ಲಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ವಿಶೇಷ ಪ್ರಾತಿನಿಧ್ಯದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಈ ವಿಶೇಷ ಕ್ಷೇತ್ರದ ಜೊತೆಗೆ, ಭಾರತೀಯ ಸಂವಿಧಾನದ ಅಡಿಯಲ್ಲಿ ಕೊಡವರಿಗೆ ಬುಡಕಟ್ಟು ಮಾನ್ಯತೆ, ೮ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ತಕ್ (ಭಾಷೆ)ಗೆ ಸಾಂವಿಧಾನಿಕ ರಕ್ಷಣೆ ಮತ್ತು ೬ನೇ ಶೆಡ್ಯೂಲ್ ಅಡಿಯಲ್ಲಿ ಸ್ವಾಯತ್ತ ಕೊಡವ ಭೂಮಿ ನಿರ್ಮಾಣಕ್ಕೆ ಮತ್ತು ಕೊಡವ ಬಂದೂಕು ಹಕ್ಕು, ಸಾಂವಿಧಾನಿಕ ಮತ್ತು ಕಾನೂನಾತ್ಮಕ ರಕ್ಷಣೆ “ಅಗತ್ಯ ಧಾರ್ಮಿಕ ಚಟುವಟಿಕೆಗಳ ಕಾಯಿದೆಯಡಿ ಕೊಡವ ಸಾಂಪ್ರದಾಯಿಕ ‘ಬಂದೂಕು-ತೋಕ್’ಗಾಗಿ ಇರುವ ಸಾಂವಿಧಾನಿಕ ವಿಶೇಷ ಖಾತರಿ ನೀಡಬೇಕೆಂದು ಸಿಎನ್‌ಸಿ ಪರವಾಗಿ ನಾಚಪ್ಪ ಅವರು ಆಗ್ರಹಿಸಿದರು.

ಸಿಎನ್‌ಸಿ ಈ ಬೇಡಿಕೆಗಳ ಕುರಿತು ೨೦೨೩, ೨೦೨೪ ಮತ್ತು ೨೦೨೫ ರಲ್ಲಿ ಮನವಿಗಳನ್ನು ಸಲ್ಲಿಸಿದೆ ಮತ್ತು ಕೊಡಗಿನ ಹಲವೆಡೆಮಾನವ ಸರಪಳಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ೫೪೩ ಕ್ಷೇತ್ರವಿದ್ದ ಲೋಕಸಭಾ ಸ್ಥಾನಗಳನ್ನು ೮೧೬ ಕ್ಕೆ ಏರಿಸುವ ಉದ್ದೇಶಿತ ಮಸೂದೆಯು ಅಂಗೀಕರಿಸಲ್ಪಟ್ಟಿದ್ದು, ಕರ್ನಾಟಕಕ್ಕೆ ಈಗಿದ್ದ ೨೮ ರಿಂದ ೪೨ ಸ್ಥಾನಗಳು ದೊರೆಯಲಿದೆ. ಹೀಗಿರುವಾಗ ಉದ್ದೇಶಿತ ಪಾರ್ಲಿಮೆಂಟ್ ಕ್ಷೇತ್ರಕ್ಕೆ ಕೊಡವ ಅಸ್ಮಿತೆಯ ಹೆಸರಿನಲ್ಲಿ ಹಳೆ ಮೈಸೂರು ಪ್ರದೇಶದ ಜನ ಸಂಖ್ಯಾ ತೂಕವಿರುವ ಇತರ ಸಮುದಾಯದ ಹಿತಾಸಕ್ತಿಗೆ ಪೂರಕವಾಗಿ ಸುಳ್ಯ, ಸಕಲೇಶಪುರ, ಅರಕಲಗೋಡು, ಪಿರಿಯಾಪಟ್ಟಣ, ಹುಣಸೂರು, ಹೆಚ್.ಡಿ. ಕೋಟೆಗಳನ್ನು ಸೇರ್ಪಡಿಸಿ ಹೊಸ ಲೋಕಸಭಾ ಸ್ಥಾನಕ್ಕೆ ಹುನ್ನಾರ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

೧೮೭೧-೭೨ ರಿಂದ ೧೯೩೧ ರವರೆಗೆ, ರಾಷ್ಟಿçÃಯ ಜನಗಣತಿಯಲ್ಲಿ ಕೊಡವರನ್ನು ಒಂದು ಪ್ರತ್ಯೇಕ ಜನಾಂಗ ಎಂದು ದಾಖಲಿಸಲಾಗಿತ್ತು. ೧೯೪೧ ರ ನಂತರ, ಕೊಡವರ ಅಸ್ಮಿತೆ ಮತ್ತು ಅಸ್ತಿತ್ವಕ್ಕೆ ಮಾರಕವಾಗುವಂತೆ ಅವರನ್ನು ಸಮೀಕರಣದ ಮೂಲಕ ದೊಡ್ಡ ಗುಂಪುಗಳೊAದಿಗೆ ವಿಲೀನಗೊಳಿಸಲಾಯಿತು. ಕೊಡವರು ಒಂದು ಧರ್ಮವಾಗಲಿ ಅಥವಾ ಜಾತಿಯಾಗಲಿ ಅಲ್ಲ. ನಮ್ಮ ಭವಿಷ್ಯವನ್ನು ನಿರ್ಧರಿಸಲು ೨೦೨೭ ರ ಜನಗಣತಿಯಲ್ಲಿ ಪ್ರತ್ಯೇಕವಾಗಿ ಎಣಿಕೆ ಮಾಡುವುದು ಅತ್ಯಗತ್ಯವಾಗಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಐಶ್ವರ್ಯ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸತ್ಯಾಗ್ರಹದಲ್ಲಿ ಲೆಫ್ಟಿನೆಂಟ್ ಕರ್ನಲ್ ಬಿ. ಎಂ. ಪಾರ್ವತಿ, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಅಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಅಜ್ಜಿಕುಟ್ಟಿರ ಲೋಕೇಶ್, ಬೇಪಡಿಯಂಡ ಬಿದ್ದಪ್ಪ, ನಂದೇಟಿರ ರವಿ ಸುಬ್ಬಯ್ಯ, ಅರೆಯಡ ಗಿರೀಶ್ ತಿಮ್ಮಯ್ಯ, ಮಂದಪAಡ ಮನೋಜ್ ಮಂದಣ್ಣ, ಕಿರಿಯಮಾಡ ಶೆರಿನ್, ಪುಟ್ಟಿಚಂಡ ಡಾನ್ ದೇವಯ್ಯ, ಚೋಳಪಂಡ ನಾಣಯ್ಯ, ಮಣವಟ್ಟಿರ ಸ್ವರೂಪ್, ಮೇದುರ ಕಂಠಿ, ನಂದಿನೆರವAಡ ಅಯ್ಯಣ್ಣ, ಬಡುವಂಡ ವಿಜಯ, ನಂದಿನೆರವAಡ ವಿಜು, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಮಣವಟ್ಟಿರ ನಂದ, ಐಲಪಂಡ ಮಿಟ್ಟು, ಸಾದೇರ ರಮೇಶ್, ಚೊಕ್ಕಂಡ ಕಟ್ಟಿ, ಅವರೆಮಾದಂಡ ಚಂಗಪ್ಪ ಅವರುಗಳು ಹಾಜರಿದ್ದರು.