ಕಣಿವೆ, ಏ. ೨: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಗತ್ತು ಅಗ್ನಿಕುಂಡದಲ್ಲಿ ಬೇಯುತ್ತಿದೆ. ಅದರ ಪರಿಣಾಮ ಅಡುಗೆ ಮನೆಗಳಿಗೂ ವ್ಯಾಪಿಸಿದ್ದು, ಜನರಿಗೆ ನೆಮ್ಮದಿಯ ಬದುಕು ಬೇಕಾಗಿದೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶಿಸಿದರು.

ನಂಜರಾಯಪಟ್ಟಣದ ನಂಜುAಡೇಶ್ವರ ದೇವರ ಪೂಜೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು, ದೇವರ ಉತ್ಸವಗಳಲ್ಲಿ ಪ್ರತಿಯೊಬ್ಬರು ಭಾಗಿಯಾಗುವ ಮೂಲಕ ಅಂತರAಗದಲ್ಲಿ ದೇವರನ್ನು ಕಾಣಬೇಕಿದೆ. ಇವನಾರವ ಇವನಾರವ ಎನ್ನದೇ ಇವನಮ್ಮವ ಎಂಬ ವಾತ್ಸಲ್ಯದಿಂದ ಎಲ್ಲರನ್ನೂ ಅಪ್ಪುವ ಮೂಲಕ ಸುಂದರ ಬದುಕು ಕಟ್ಟಬೇಕಿದೆ. ಪ್ರತಿಯೊಬ್ಬರು ಸಂಸ್ಕಾರಯುತ ಜೀವನಕ್ಕೆ ತೆರೆದುಕೊಳ್ಳಲು ಮಠ, ಮಾನ್ಯಗಳು ಹಾಗೂ ದೇವಾಲಯಗಳ ದರ್ಶನ ಮಾಡಬೇಕು ಎಂದರು. ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ದೇವಾಲಯ ಸಮಿತಿ ಅಧ್ಯಕ್ಷ ಮೋಹನಕುಮಾರ್, ಕಾರ್ಯದರ್ಶಿ ಪ್ರೇಮಾನಂದ, ಖಜಾಂಚಿ ಮುರುಳಿ ಮಾದಯ್ಯ ಇದ್ದರು.