ಗೋಣಿಕೊಪ್ಪ ವರದಿ, ಮಾ. ೩೦ ; ಮುಳಿಯ ಜ್ಯುವೆಲ್ಸ್ ಗೋಣಿಕೊಪ್ಪ ಶಾಖೆಯಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಡೈಮಂಡ್ ಫೆಸ್ಟ್ಗೆ ಸೋಮವಾರ ಚಾಲನೆ ನೀಡಲಾಯಿತು. ಕೊಡವ ನಟಿ ಕಾಣತಂಡ ಬೀನಾ ಜಗದೀಶ್ ಉದ್ಘಾಟಿಸಿ ಮಾತನಾಡಿ, ಮುಳಿಯ ಜ್ಯುವೆಲ್ಸ್ ಉತ್ತಮ ವಿನ್ಯಾಸದ ಆಭರಣ ನೀಡುವುದರೊಂದಿಗೆ ಕ್ರೀಡೆ, ಸಾಮಾಜಿಕ ಕಾರ್ಯಗಳಿಗೂ ಉತ್ತೇಜನ ನೀಡುತ್ತಿರುವುದರಿಂದ ಜನರೊಂದಿಗೆ ಬೆರೆತಂತಾಗಿದೆ ಎಂದರು.

ಶಾಖೆಯ ಸಹಾಯಕ ವ್ಯವಸ್ಥಾಪಕ ಬಲ್ಯಮೀದೇರಿರ ಸೋಮಣ್ಣ ಮಾತನಾಡಿ, ಒಂದು ತಿಂಗಳ ಕಾಲ ಡೈಮಂಡ್ ಫೆಸ್ಟ್ ನಡೆಯುತ್ತಿದ್ದು, ಪ್ರತೀ ರೂ. ೫೦ ಸಾವಿರದ ಖರೀದಿಗೆ ವಿಶೇಷ ಕೂಪನ್ ಪಡೆದುಕೊಂಡು ಸ್ಕೂಟರ್ ಗೆಲ್ಲುವ ಅದೃಷ್ಠವಕಾಶ ಫೆಸ್ಟ್ನಲ್ಲಿ ಸಿಗಲಿದೆ ಎಂದರು. ಶಾಖೆಯ ಹಿರಿಯ ಸಿಬ್ಬಂದಿ ನಯನ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಪಾಲ್ಗೊಂಡು ಶುಭ ಕೋರಿದರು.