ನಾಪೋಕ್ಲು, ಮಾ. ೩೦ : ಇಲ್ಲಿಗೆ ಸಮೀಪದ ವೆಸ್ಟ್ ಕೊಳಕೇರಿ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ವಿವಿಧ ಆರಾಧನಾ ಕಾರ್ಯಕ್ರಮಗಳೊಂದಿಗೆ ಸಾಂಪ್ರದಾಯಕವಾಗಿ ಹಾಗೂ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊAಡಿತು. ಉತ್ಸವದ ಅಂಗವಾಗಿ ತಾ. ೨೨ರಂದು ದೇವಾಲಯದಲ್ಲಿ ದೀಪಾರಾಧನೆ (ಅಂದಿ ಬೊಳಕ್) ಉತ್ಸವ ತಾ. ೨೩ ರಂದು ಪಟ್ಟಣಿ. ತಾ. ೨೪.ರಂದು ದೇವರ ಅವಭೃತ ಸ್ನಾನ, ತಾ. ೨೫ ರಂದು ಶುದ್ಧ ಕಲಶ, ತಾ. ೨೬ ರಂದು ಬೋಟೆಕಾರ ಅಯ್ಯಪ್ಪ ದೇವರ ಉತ್ಸವ ವಿಜೃಂಭಣೆಯಿAದ ಜರುಗಿತು. ಎತ್ತುಪೋರಾಟ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ, ದೇವಾಲಯದ ಆವರಣದಲ್ಲಿ ಗ್ರಾಮಸ್ಥರಿಂದ ಬೋಳಕಾಟ್, ದೇವರ ಪ್ರದರ್ಶನ ನೃತ್ಯ ಮಹೋತ್ಸವ ಸಾಂಗವಾಗಿ ನೆರವೇರಿತು. ದೇವಾಲಯದ ತಕ್ಕ ಮುಖ್ಯಸ್ಥರು ಆಡಳಿತ ಮಂಡಳಿ ಅಧ್ಯಕ್ಷರು, ನಿರ್ದೇಶಕರು, ಊರು, ಪರ ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.