ಕೂಡಿಗೆ, ಮಾ. ೩೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ನವಗ್ರಾಮದಲ್ಲಿ ವೋಲ್ಟೇಜ್ ಸಮಸ್ಯೆಯಿದ್ದ ಕಾರಣ ಹೆಚ್ಚು ಸಾಮರ್ಥ್ಯವಿರುವ ಟಿ.ಸಿ. ಅಳವಡಿಸಲಾಯಿತು.
ನವಗ್ರಾಮದಲ್ಲಿ ವೋಲ್ಟೇಜ್ ಸಮಸ್ಯೆಯಿಂದಾಗ ಆಗಾಗ್ಗೆ ವಿದ್ಯುತ್ ಕಡಿತ ಹಾಗೂ ಇನ್ನಿತರ ಸಮಸ್ಯೆಗಳು ಎದುರಾಗುತ್ತಿದ್ದವು. ಈ ಹಿನ್ನಲೆ ಶಾಸಕರ ಸೂಚನೆ ಮೇರೆಗೆ ನೂತನ ಟಿಸಿ ಅಳವಡಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಬಿ. ಷಂಶುದ್ದೀನ್ ತಿಳಿಸಿದರು.
ನವಗ್ರಾಮದಲ್ಲಿ ವೋಲ್ಟೇಜ್ ಸಮಸ್ಯೆ ಇರುವ ಕಾರಣ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲಾಗಿತ್ತು. ಶಾಸಕರು ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ನವಗ್ರಾಮದಲ್ಲಿ ಹೆಚ್ಚು ವೋಲ್ಟೇಜ್ ಸಾಮರ್ಥ್ಯವಿರುವ ಟಿಸಿಯನ್ನು ಸಂಬAಧಿಸಿದ ಇಲಾಖೆಯವರು ಅಳವಡಿಸಲು ಮುಂದಾಗಿದ್ದಾರೆ. ಈ ಸಂದರ್ಭ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಜೆ.ಇ. ರಾಣಿ, ಲೈನ್‌ಮ್ಯಾನ್‌ಗಳಾದ ಮಹದೇವ್, ರವಿ, ರಹಮಾನ್, ವೆಂಕಟೇಶ್ ಇನ್ನಿತರರು ಇದ್ದರು.