ನಾಪೋಕ್ಲು, ಮಾ. ೩೦: ಸಮೀಪದ ಕಕ್ಕಬ್ಬೆಯ ಯವಕಪಾಡಿ ಗ್ರಾಮದ ನೆಟ್ಟುಮಾಡು ಶ್ರೀ ಭಗವತಿ ದೇವಿಯ ಬ್ರಹ್ಮ ಕಲಶ ಮತ್ತು ಪುನರ್ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ೧೦.೨೧ ರಿಂದ ೧೧.೩೦ರ ವೃಷಭ ಲಗ್ನದಲ್ಲಿ ಅಮ್ಮನವರ ಬಿಂಬ ಪ್ರತಿಷ್ಠೆ ಜೀವ ಕಲಶ ಅಭಿಷೇಕ, ಶಿಖರ ಪ್ರತಿಷ್ಠೆ, ಪರಿವಾರ ಪ್ರತಿಷ್ಠೆ ನಡೆಯಿತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಪುನರ್ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಸಂಜೆ ದೇವರ ಉತ್ಸವ ಜರುಗಿ ಮಂತ್ರಾಕ್ಷತೆ ನಡೆಯಿತು.

ದೇವಸ್ಥಾನದಲ್ಲಿ ನೂತನವಾಗಿ ಪುನರ್ ನಿರ್ಮಿಸಿರುವ ದೇವ ಸಾನಿಧ್ಯ ಬಿಂಬ ಪುನರ್ ಪ್ರತಿಷ್ಠೆ, ಅಷ್ಟ ಬಂಧ ಲೇಪನ, ಬ್ರಹ್ಮ ಕಲಶ ಕಾರ್ಯಕ್ರಮದ ಪೂರ್ವ ಕಾರ್ಯಕ್ರಮವು ತಾರೀಕು ೨೨ ರಿಂದ ಪ್ರಾರಂಭಗೊAಡು ಇದರ ಅಂಗವಾಗಿ ಗಣಪತಿ ಹೋಮ, ಬಿಂಬಶುದ್ದಿ, ಕಲಶಾಭಿಷೇಕ, ಶಾಂತಿ ಹೋಮ, ಪ್ರಾಯಶ್ಚಿತ ಹೋಮಗಳು ನಡೆದವು. ದುರ್ಗಾ ನಮಸ್ಕಾರ ಪೂಜೆ ಗಣಪತಿ ಹೋಮ, ಸಂಹಾರ ತತ್ವ ಹೋಮ, ಸಂಹಾರ ತತ್ವ ಕಲಶ ಪೂಜೆ, ಸಂಹಾರ ತತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ, ದೇವ ಕಲಶ ಪೂಜೆ, ಜೀವದ್ವಾಪನೆ, ಜೀವ ಕಲಶ ನೆರವೇರಿದವು. ಸಂಜೆ ಕುಂಬೇಶ ಕರ್ಕರಿ ಕಲಶ ಪೂಜೆ, ಆದಿ ವಾಸ ಹೋಮ, ಧ್ಯಾನ ಧೀವಾಸ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ಬುಧವಾರ ಬೆಳಿಗ್ಗೆ ಗಣಪತಿ ಹೋಮ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆಯೊಂದಿಗೆ ಪುನರ್ ಪ್ರತಿಷ್ಟಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭ ದೇವಸ್ಥಾನದ ತಕ್ಕಮುಖ್ಯಸ್ಥರಾದ ಪಾಂಡAಡ ಜೆ. ನರೇಶ್, ಆಡಳಿತ ಮಂಡಳಿ ಅಧ್ಯಕ್ಷ ಬಡಕಡ ಎಂ. ತಿಮ್ಮಯ್ಯ, ಕಾರ್ಯದರ್ಶಿ ಅಂಜಪರವAಡ ಚೋಮನಿ ಹಾಗೂ ಸದಸ್ಯರು, ದೇವಾಲಯದ ಮುಖ್ಯ ಅರ್ಚಕ ಪದ್ಮನಾಭ ಉಡುಪ ಸೇರಿದಂತೆ ಊರ ಮತ್ತು ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.