ಗೋಣಿಕೊಪ್ಪಲು, ಮಾ.೨೯: ಬೇಸಿಗೆ ಕಾಲ ಆರಂಭವಾಗಿದ್ದು, ಜನರಿಗೆ ಕುಡಿಯುವ ನೀರಿನ ತೊಂದರೆ ಎದುರಾಗಬಾರದೆಂಬ ಉದ್ದೇಶದಿಂದ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ತಮ್ಮ ವ್ಯೆಯಕ್ತಿಕ ರೂ. ೨೮ ಲಕ್ಷದ ಹಣದಲ್ಲಿ ೮ ಸಾವಿರ ಲೀ. ಸಾಮರ್ಥ್ಯ ಹೊಂದಿರುವ ನೂತನ ಟ್ಯಾಂಕರ್‌ನ್ನು ಒದಗಿಸಿದ್ದಾರೆ.

ನೂತನ ಟ್ಯಾಂಕರ್‌ಅನ್ನು ಪೊನ್ನಂಪೇಟೆ ಪಟ್ಟಣದ ಬಸವೇಶ್ವರ ದೇವಾಲಯ ಮುಂದೆ ಲೋಕಾರ್ಪಣೆ ಮಾಡಿದರು. ಬಸವೇಶ್ವರ ದೇವಾಲಯದ ಅರ್ಚಕರಿಂದ ಪೂಜೆ ಸಲ್ಲಿಸಿದ ತರುವಾಯ ಲೋಕಾರ್ಪಣೆ ನಡೆಯಿತು. ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ತಮ್ಮ ವೈಯಕ್ತಿಕ ಹಣದಿಂದ ಕುಡಿಯುವ ನೀರಿನ ಟ್ಯಾಂಕರ್ ಒದಗಿಸಲಾಗಿದೆ. ಬೇಸಿಗೆ ಕಾಲದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಸಾಧ್ಯತೆ ಇರುವುದರಿಂದ ಮುಂಜಾ ಗ್ರತಾ ಕ್ರಮವಾಗಿ ನೀರಿನ ಟ್ಯಾಂಕರ್ ನೀಡಲಾಗಿದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದÀÄ.

ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಆಲೀರ ರಶೀದ್ ಮಾತನಾಡಿ, ಪೊನ್ನಂಪೇಟೆ ತಾಲೂಕಿನ ನಾನಾ ಭಾಗಗಳಲ್ಲಿ ನೀರಿನ ತೊಂದರೆ ಇರುವುದರಿಂದ ಕುಡಿಯುವ ನೀರಿನ ಟ್ಯಾಂಕರ್ ಒದಗಿಸಿರುವುದು ಉತ್ತಮ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೊಲ್ಲಿರ ಬೋಪಣ್ಣ, ಮೂಕಳೇರ ಕುಶಾಲಪ್ಪ, ಕೋಳೆರ ಭಾರತಿ, ತೀತಮಾಡ ಯಶ್ವೀನ್, ಮೂಕಳೇರ ಸುಮಿತ್ರಾ, ಮೂಕಳೇರ ಆಶಾ, ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.